ಕೆಆರ್ ಪುರ: 500 ವರ್ಷಗಳಿಗೂ ಹಿಂದೆ ಜೀವಿಸಿದ್ದ ಕನಕದಾಸರು ಇಂದೂ ನಮಗೆ ಪ್ರಸ್ತುತ. ಎಲ್ಲಾ ದಾಸರು ಕೀರ್ತನೆ ಗಳನ್ನು ಬರೆದಿದ್ದರೂ ಕನಕದಾಸರು ಅವರಲ್ಲಿ ಶ್ರೇಷ್ಠರಾಗಿ ಕಂಡುಬರುತ್ತಾರೆ. ಅದಕ್ಕೆ ಕಾರಣ ಕನಕದಾಸರು ಸಮಾಜ ದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವುದಕ್ಕೆ ಮಾಡಿದ ಪ್ರಯತ್ನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ರತ್ನಗಳು ಎಂದು ಶಾಸಕ ಬೈರತಿ ಬಸವರಾಜ್ ಅಭಿಪ್ರಾಯ ಪಟ್ಟರು.
ಬೆಂಗಳೂರು ಪೂರ್ವ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕೆಆರ್ ಪುರದಲ್ಲಿ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕನಕ ದಾಸರ ಕೀರ್ತನೆಗಳು 16 ನೇ ಶತಮಾನದಲ್ಲೇ ಸಮಾಜಕ್ಕೆ ಸಾರಿದರು ಅವರ ಮಾರ್ಗದರ್ಶನ ದಲ್ಲಿ ನಾವು ಸಾಗಬೇಕಿದೆ ಎಂದರು. ಮಹಾನ್ ಸಂತ ಕನಕದಾಸರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜ ಬಾಂದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದರು.
Hubballi: ರೈತರ ಬೆಳೆಗೆ ಉತ್ತಮ ದರಕ್ಕಾಗಿ ಭೂಮಿ ಆಪ್ ರಚನೆ; ರಘುನಂದನ್!
ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಸಾಧಕರಿಗೆ ಗೌರವಿಸಲಾಯಿತು
ಈ ಸಂದರ್ಭದಲ್ಲಿ ತಹಶಿಲ್ದಾರರಾದ ರಾಜೀವ್, ಮಹೇಶ್, ಬಿಇಒ ಗೋವಿಂದಪ್ಪ, ನಾಗರಾಜ್, ಮಾಜಿ ಪಾಲಿಕೆ ಸದಸ್ಯರಾದ ಶ್ರೀಕಾಂತ್, ಆಂತೋಣಿ ಸ್ವಾಮಿ, ಮೇಡಹಳ್ಳಿ ಕೃಷ್ಣಮೂರ್ತಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.