ಬಳ್ಳಾರಿ: ಜಿಲ್ಲೆಯ ಪ್ರಸಿದ್ಧ ಗ್ರಾಮದೇವತೆಯಾದ ಕನಕ ದುರ್ಗಮ್ಮನವರ ಸಿಡಿಬಂಡಿ ರಥೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಕರ್ನಾಟಕ ಮಾತ್ರವಲ್ಲದೆ, ಕರ್ನಾಟಕದ ಗಡಿಗೆ ಹೊಂದಿಕೊಂಡಂತಿರುವ ಆಂಧ್ರಪ್ರದೇಶದ ಗಡಿ ಭಾಗದಿಂದರೂ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇಗುಲದಲ್ಲಿ ಹಲವಾರು ಧಾರ್ಮಿಕ ಆಚರಣೆಗಳು ನಡೆದವು. ಸಿಡಿಬಂಡಿಯನ್ನು ದೇವಸ್ಥಾನದ ಸುತ್ತಲೂ ಮೂರು ಸುತ್ತು ಸುತ್ತುವರಿಸಲಾಯಿತು. ಕೆಲವು ಭಕ್ತರು ಸಿಡಿಬಂಡಿಗೆ ಹಣ್ಣು, ಹೂವುಗಳನ್ನು ಎಸೆದರೆ, ಇನ್ನೂ ಕೆಲವರು ಜೀವಂತ ಕೋಳಿಗಳನ್ನು ತೂರಿ ತಮ್ಮ ಭಕ್ತಿ ಸಮರ್ಪಿಸಿದರು.
ಬೆಳಗ್ಗೆಯಿಂದ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ನಡೆದ ಸಿಡಿಬಂಡಿ ಉತ್ಸವಕ್ಕೆ ಎತ್ತುಗಳನ್ನು ಕಟ್ಟಿ ದೇವಸ್ಥಾನದ ಸುತ್ತ ಮೂರು ಸುತ್ತು ಸಿಡಿಬಂಡಿ ಸುತ್ತಲಾಯಿತು. ಉತ್ಸವಕ್ಕೆ ಭಕ್ತ ಸಮೂಹ ಹೂ ಹಣ್ಣು ಎಸೆದು ಭಕ್ತಿ ಅರ್ಪಿಸಿದರೇ, ಇನ್ನೂ ಕೆಲ ಭಕ್ತರು ಜೀವಂತ ಕೋಳಿಗಳನ್ನು ಸಿಡಿಬಂಡಿಗೆ ತೂರುವ ಮೂಲಕ ಭಕ್ತಿ ಸಮರ್ಪಿಸಿದರು.
ಸಿಡಿಬಂಡಿ ಉತ್ಸವಕ್ಕೆ ರಾಜ್ಯ ಸೇರಿ ನೆರೆಯ ಆಂಧ್ರ, ತೆಲಂಗಾಣ ಭಾಗಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಆಗಮಿದ್ದರು. ಸೋಮವಾರ ರಾತ್ರಿಯಿಂದಲೇ ದೂರದ ಊರಿನಿಂದ ನೂರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಹರಿದುಬಂದಿತ್ತು. ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ನೆರಳಿನ ವ್ಯವಸ್ಥೆ, ಕುಡಿವ ನೀರು, ಮಜ್ಜಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಭದ್ರತಾ ವ್ಯವಸ್ಥೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ದೇವಸ್ಥಾನದಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.