ಭೋಪಾಲ್: ಮಧ್ಯಪ್ರದೇಶದಲ್ಲಿ (Madhyapradesh) ಕಾಂಗ್ರೆಸ್ ಹೀನಾಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ (Congress) ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಗೆಲುವು ಖಚಿತವಾಗಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಸೋಲು ಕಂಡ ಮರುದಿನವೇ ಕಮಲ್ ನಾಥ್ (Kamal Nath) ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಗೆಲುವಿನ ಬಗ್ಗೆ ಪಕ್ಷಕ್ಕೆ ಎಷ್ಟು ಮನವರಿಕೆಯಾಗಿತ್ತೆಂದರೆ ಮತ ಎಣಿಕೆಯ ದಿನ ಬೆಳಿಗ್ಗೆಯೇ ಕಮಲ್ನಾಥ್ ಅವರಿಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ಗಳನ್ನು ಹಾಕಲಾಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಬಿಜೆಪಿ ಮುನ್ನಡೆ ಸಾಧಿಸಿದ್ದರಿಂದ ಬ್ಯಾನರ್ ತೆರವುಗೊಳಿಸ ಲಾಯಿತು. ರಾಜ್ಯದಲ್ಲಿ ಬಿಜೆಪಿ ವಿರುದ್ಧ ಅಲೆ ಕಂಡುಬಂದಿದ್ದರಿಂದ ಕಾಂಗ್ರೆಸ್ ಗೆಲುವಿನ ನಿರೀಕ್ಷೆಯಲ್ಲಿತ್ತು.
ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್… ‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ
ಹೀಗಾಗಿ ಹೆಚ್ಚಿನ ಪ್ರಚಾರವನ್ನು ಕಾಂಗ್ರೆಸ್ ನಾಯಕರು ಕೈಗೊಂಡಿರಲಿಲ್ಲ. ಇದು ಮತದಾರರೊಂದಿಗಿನ ಸಂವಹನದ ಮೇಲೆ ಪರಿಣಾಮ ಬೀರಿತು ಮತ್ತು ಪಕ್ಷದ ಸಂದೇಶವನ್ನು ರವಾನಿಸಲು ಸಾಧ್ಯವಾಗಲಿಲ್ಲ ಎಂದು ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಐಎನ್ಡಿಐಎ ಒಕ್ಕೂಟದ ಸಮಾಜವಾದಿ ಪಕ್ಷಕ್ಕೆ ಭರವಸೆ ನೀಡಲಾದ ಐದರಿಂದ ಏಳು ಸ್ಥಾನಗಳನ್ನು ನಿರಾಕರಿಸುವುದು ಮೈತ್ರಿ ನಾಯಕರ ಕೋಪಕ್ಕೆ ಕಾರಣವಾಗಿದೆ.