ಬಹುಭಾಷಾ ನಟ ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಇಂಡಿಯನ್-2 ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. 1996ರಲ್ಲಿ ತೆರೆಕಂಡ ‘ಇಂಡಿಯನ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸೇನಾಪತಿ ಪಾತ್ರದಲ್ಲಿ ಕಮಲ್ ಹಾಸನ್ ಕಾಣಿಸಿಕೊಂಡಿದ್ದು ಅದರ ಮುಂದುವರಿದ ಭಾಗವಾಗಿ ‘ಇಂಡಿಯನ್ 2’ ಸಿನಿಮಾ ಸಿದ್ದವಾಗಿದೆ.
ಸಣ್ಣದೊಂದು ಝಲಕ್ ಮೂಲಕ ಭಾರೀ ನಿರೀಕ್ಷೆ ಹೆಚ್ಚಿಸಿರುವ ಇಂಡಿಯನ್ -2 ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾಯ್ತಿದ್ದಾರೆ. ಇದೀಗ ಸಿನಿಮಾ ಕಂಪ್ಲೀಟ್ ಆಗಿದ್ದು ತೆರೆಗೆ ಬರಲು ಸಜ್ಜಾಗಿದೆ. ಜೂನ್ ತಿಂಗಳಲ್ಲಿ ಕಮಲ್ ಹಾಗೂ ಶಂಕರ್ ಜೋಡಿಯ ಚಿತ್ರ ತೆರೆಗೆ ಬರುತ್ತಿದೆ. ಆದರೆ ಯಾವ ದಿನ ಇಂಡಿಯನ್ ಸೀಕ್ವೆಲ್ ಬಿಡುಗಡೆಯಾಗಲಿದೆ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿಲ್ಲ.
ಸದ್ಯ ಬಿಡುಗಡೆ ಆಗಿರುವ ಪೋಸ್ಟರ್ ನಲ್ಲಿ “ಸೇನಾಪತಿಯ ಪುನರಾಗಮನಕ್ಕೆ ಸಿದ್ಧರಾಗಿ! ಭಾರತೀಯ-2 ಇದೇ ಜೂನ್ನಲ್ಲಿ ಚಿತ್ರಮಂದಿರಗಳಲ್ಲಿ ಬಿರುಗಾಳಿ ಎಬ್ಬಿಸಲು ಸಿದ್ಧವಾಗಿದೆ. ಮಹಾಕಾವ್ಯಕ್ಕಾಗಿ ನಿಮ್ಮ ಕ್ಯಾಲೆಂಡರ್ ಅನ್ನು ಗುರುತು ಮಾಡಿಕೊಳ್ಳಿ ಎಂದು ಅಡಿ ಬರಹ ನೀಡಲಾಗಿದೆ.
ಇಂಡಿಯನ್ 2 ಚಿತ್ರದಲ್ಲಿ ಕಮಲ್ ವೀರಶೇಖರನ್ ಸೇನಾಪತಿಯಾಗಿ ನಟಿಸಿದ್ದಾರೆ. ಫ್ರಾಂಚೈಸಿಯು ಕಮಲ್ ಮತ್ತು ನಿರ್ದೇಶಕ ಎಸ್ ಶಂಕರ್ ಕಾಂಬಿನೇಷನ್ ನ ಸಿನಿಮಾಗೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ.