ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ದಿವ್ಯ ಕರುಣಾಲಯ ಅನಾಥಾಶ್ರಮದ ಬಳಿ ಹಲವು ದಿನಗಳಿಂದ ಅಡಗಿ ಕುಳಿತಿದ್ದ ಎರಡು ದೈತ್ಯ ನಾಗರಹಾವುಗಳನ್ನು ಉರಗ ತಜ್ಞ ಸ್ನೇಕ್ ಆರೀಫ್ ಸೆರೆ ಹಿಡಿದಿದ್ದಾರೆ.
Hubballi: ಫೆ.7 ರಿಂದ 11 ರವರೆಗೆ 17 ಸೇವೆಗಳ ಸಮರ್ಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು!
ಈ ಆಶ್ರಮಕ್ಕೆ ಸೇವೆ ನೀಡಲು ಬರುವ ದಾನಿಗಳಿಗೆ ಹಾಗೂ ಸ್ಥಳೀಯರಿಗೆ ಆಗಾಗ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು, ಹೀಗಾಗಿ ಎರಡು ಹಾವುಗಳನ್ನು ಹಿಡಿದು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಉರಗ ತಜ್ಞ ಸ್ನೇಕ್ ಆರೀಫ್ ಈವರೆಗೆ ಆರು ಸಾವಿರಕ್ಕೂ ಹೆಚ್ಚು ನಾಗರ ಹಾವುಗಳು, ಹಾಗೂ 315 ಕಾಳಿಂಗ ಸರ್ಪಗಳನ್ನು ರಕ್ಷಣೆ ಮಾಡಿದ್ದೇನೆ ಎಂದರು.