ಕಲಘಟಗಿ: ಒಂದು ಕಾಲದಲ್ಲಿ ಬತ್ತದ ಬೆಳೆ ಬೆಳೆಯುವುದರಲ್ಲಿ ತನ್ನದೇ ಆದ ಹೆಸರನ್ನ ತೊಟ್ಟಿಲು ಪಟ್ಟಣ ಕಲಘಟಗಿ ಪಡೆದಿತ್ತು.
ಕಳೆದ 20 ವರ್ಷಗಳಲ್ಲಿ ಹಂತ ಹಂತವಾಗಿ ಭತ್ತದ ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ.
ಮಂಡ್ಯ: ದೇಶಹಳ್ಳಿ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲು!
ಇದಕ್ಕೆ ಅತೀವೃಷ್ಟಿ, ಅನಾವೃಷ್ಠಿ, ಬೆಲೆ ಕುಸಿತ, ಕಾರ್ಮಿಕರ ಸಮಸ್ಯೆ ಹೀಗೆ ಹಲವಾರು ಕಾರಣದಿಂದಾಗಿ ತಾಲೂಕಿನ ರೈತರು ಭತ್ತದ ಬೆಳೆಯನ್ನು ಬೆಳೆಯಲು ಹಿಂದೇಟು ಹಾಕತಾ ಇದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಬೆಳೆಯ ಪ್ರಮಾಣದಲ್ಲಿ ಏರಿಕೆ ಆಗಿದೆ.
ಸಾಕಷ್ಟು ಅತೀವೃಷ್ಟಿ ನಡುವೆಯೂ ಗಣನೀಯ ಪ್ರಮಾಣದಲ್ಲಿ ಭತ್ತ ಬೆಳೆದಿದ್ದು ಖುಷಿಯ ವಿಷಯ. ಈಗ
ಭತ್ತದ ಗದ್ದೆಗಳಲ್ಲಿ ನೀರು, ತಂಪಾದ ತೇವಾಂಶದ ವಾತಾವರಣ ದಿಂದ ಬತ್ತದ ಬೆಳೆ ಸರಿಸುಮಾರು ಏಳ ರಿಂದ ಎಂಟು ಅಡಿಯಷ್ಟು ಬೆಳೆದಿದ್ದು ಈ ವರ್ಷದಲ್ಲಿ ಹೆಸರುವಾಸಿಯಾಗಿದೆ.
ಅದೇ ರೀತಿಯಾಗಿ ಬತ್ತದೆ ತೆನೆ ಕೂಡ ಸಾಕಷ್ಟು ಪ್ರಮಾಣದಲ್ಲಿದ್ದು ಭತ್ತದ ಬೆಳೆಗಳಿಗೆ ದೃಷ್ಟಿ ಸಹ ಬೀಳುವಂತಾಗಿದ್ದು ಇದೇ ರೀತಿ ಸಮರ್ಪಕವಾಗಿ ಮಳೆಯ ವಾತಾವರಣ ಹವಾಮಾನದಿಂದ ಕೂಡಿದರೆ ಭತ್ತದ ಬೆಳೆ ರೈತರಿಗೆ ಇದೇ ರೀತಿಯಾಗಿ ಸಮೃದ್ಧಿ ಇಂದ ತೆನೆ ಜಮೀನುಗಳಿಂದ ದೊರೆತಿದ್ದೆ ಆದರೆ ತಾಲೂಕಿನ ರೈಸ್ ಮಿಲ್ ಗಳಿಗೆ ಕೆಲಸ ಕೊಡುವುದರಲ್ಲಿ ಸಂದೇಹವೇ ಇಲ್ಲ ಅನ್ನುವ ವಾತಾವರಣ ನಿರ್ಮಾಣವಾಗಿದೆ.
ಕಲಘಟಗಿ ಸುತ್ತಮುತ್ತಲಿನ ಭತ್ತದ ಬೆಳೆ ಬೆಳೆಯುವ ಪ್ರದೇಶಗಳಾದ ಸಂಗಮೇಶ್ವರ, ಹಟಗಿನಾಳ, ಕಂದಲಿ, ಸೂಳಿಕಟ್ಟಿ, ದೇವಿ ಕೊಪ್ಪ, ಬೇಗೂರು, ತಬಕದ ಹೊನ್ನಳ್ಳಿ, ಕೂಡಲಗಿ, ಇನ್ನು ಅನೇಕ ಸುತ್ತಮುತ್ತ ಕಡೆಗಳಲ್ಲಿ ಅತ್ಯಂತ ಹೆಚ್ಚು ಭತ್ತದ ಬೆಳೆಗಳನ್ನು ನೋಡಲು ವಿವಿಧ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ.
ಈಗಾಗಲೇ ತಾಲೂಕಿನ ಪ್ರತಿಯೊಂದು ಭಾಗದಲ್ಲಿ ಬತ್ತದ ತೂಕದ ಭಾರ ತಾಳಲಾಗದೆ ನೆಲಕುರುಳಿವೆ. ಮುಂಗಾರಿನ ಸಮಯದಲ್ಲಿ ಬಿತ್ತನೆ ಮಾಡುವಾಗ ಒಳ್ಳೆಯ ರೀತಿಯ ಮಳೆಯಿಂದ ತೇವಾಂಶದಿಂದ ಜಮೀನಿನಲ್ಲಿ ಬಿತ್ತನೆಯ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಕೊಂಡಿದ್ದಾರೆ.
ಸರಕಾರಿ ಗೊಬ್ಬರ, ಸಗಣಿ ಗೊಬ್ಬರ, ಈ ವರ್ಷ ಮಳೆಯ ವಾತಾವರಣ ಅತ್ಯಂತ ಒಳ್ಳೆಯದಾಗಿದೆ ತಾಲೂಕಿನಲ್ಲಿ ಪ್ರತಿಯೊಂದು ಸಾಳಿ ಜಾತಿಯ ಬತ್ತದ ಬೆಳೆ 7 – 8 ಅಡಿ ಎತ್ತರ ಬಂದಿದೆ. ಈ ತರಹದ ಬೆಳೆಯನ್ನು ಸುಮಾರು ವರ್ಷದ ಹಿಂದೆ ನೋಡಿದ್ದೇವು, ಆದರೆ ಈಗ ನಮ್ಮ ಜಮೀನಿನಲ್ಲಿ ಬೆಳೆ ಬಂದಿದ್ದು ಸಂತೋಷವಾಗಿದೆ.
ತಾಲೂಕಿನಾದ್ಯಂತ ಉತ್ತಮ ಮಳೆ ಆಗುತ್ತಿರುವುದರಿಂದ ಬತ್ತದ ಬೆಳೆ ಉತ್ತಮವಾಗಿದೆ. ಭತ್ತದ ಜಮೀನುಗಳಲ್ಲಿ ಸಂಪೂರ್ಣ ನೀರಿನಿಂದ ಇರುವುದರಿಂದ ಸಮರ್ಪಕವಾಗಿ ರಸ ಗೊಬ್ಬರ ಪೂರೈಸಿರುವುದರಿಂದ ಯಾವುದೇ ರೀತಿಯ ಕೀಟಬಾಧೆ ತಟ್ಟಿಲ್ಲ ಇದರಿಂದ ಬೆಳೆ ಗುಣಮಟ್ಟದಾಗಿದೆ.
ತಾಲೂಕಿನಲ್ಲಿ ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಬತ್ತದ ಮೇವಿಗೆ ಕಳೆದ ವರ್ಷ ಬೆಲೆ ಬಹಳ ಏರಿಕೆಯಾಗಿತ್ತು. ಈ ಸಾರಿ ಜಾನುವಾರುಗಳಿಗೆ ಸಮರ್ಪಕವಾಗಿ ಬತ್ತದ ಮೇವು ಸಿಗುತ್ತದೆ. ಪ್ರತಿ ಭತ್ತದ ಬೆಳೆ ಸುಮಾರು 7 ರಿಂದ 8 ಅಡಿಯಷ್ಟು ಎತ್ತರ ಇರೋದು ಬೆಳೆದ ರೈತನಿಗೆ ಹರುಷ ತರುವ ಮಟ್ಟಿಗೆ ಬೆಳೆದು ನಿಂತಿವೆ. ಈಗಾಗಲೇ ಬತ್ತವು ಕಟಾವಿಗೆ ಬಂದಿರುವುದರಿಂದ ಬೆಂಬಿಡದೆ ಮಳೆ ಕಾಡುತ್ತಿರುವುದು ಕೇದಕರ ಸಂಗತಿಯಾಗಿದೆ.
ಕೆಲವೊಂದು ಕಡೆ ಸಾಕಷ್ಟು ಪ್ರಮಾಣದಲ್ಲಿ ಬತ್ತದ ಜಮೀನುಗಳಿಗೆ ನೀರು ನುಗ್ಗಿ ಬತ್ತ ಮೊಳಕೆ ಒಡೆದಿವೆ ಪರಿಹಾರಕ್ಕಾಗಿ ರೈತ ವರ್ಗ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.