ಕಲಘಟಗಿ( ಧಾರವಾಡ) : ಪಟ್ಟಣದ ಮಾಚಾಪೂರ ಸೇಂಟ್ ಮೇರಿಸ್ ಸ್ಕೂಲಿನ ವಿದ್ಯಾರ್ಥಿಗಳಿಂದ ಸ್ವಚ್ಛತಾ ಸೇವಾ ದಿವಸ ಅಂಗವಾಗಿ ಮಾಚಾಪೂರ ಗಲ್ಲಿಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಒಳ ಮೀಸಲಾತಿ ಜಾರಿಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತೆ: ಸಿದ್ದರಾಮಯ್ಯ!
ಕಾರ್ಯಕ್ರಮದ ಅಂಗವಾಗಿ ಶಾಲೆಯ ಪ್ರಿನ್ಸಿಪಾಲ ಫಾದರ್ ಜಾರ್ಜ್ ಮೋನಿಸ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಹಾಗೂ ಘನತ್ಯಾಜ್ಯ ನಿರ್ವಹಣೆ ಇಲ್ಲದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆ ಬಹಳ ಅವಶ್ಯವಾಗಿದೆ ಹಾಗೂ ಸ್ವಚ್ಛತ ಬಗ್ಗೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳ ರೂಪಿಸಿದ್ದು ಪ್ರತಿಯೊಬ್ಬರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಫಾದರ್ ದೇವಸ್ಯ, ಫಾದರ್ ರಿಚರ್ಡ್, ಶರ್ಲಿ ಡವಳೆ, ಆರ್ ಡಿ ಬಡಿಗೇರ್, ಮನೋಹರ್ ಇನಿಯಪ್ಪನವರ್, ಲತಾ ನಾಯಕ್, ಚಂದ್ರಶೇಖರ್ ವಿನೋದ್ ರೆಡ್ಡಿ, ಶಂಕರ್ ಚೌಹಾಣ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.