ಕಲಬುರಗಿ: ಬೃಹತ್ ವೇದಿಕೆ.ವೇದಿಕೆ ಮೇಲೆ ಗಣ್ಣಾತಿಗಣ್ಯರು ವೇದಿಕೆ ಮುಂಭಾಗದಲ್ಲಿ ಸಾವಿರಾರು ಜನ ಎಲ್ಲರ ಎದುರಲ್ಲೇ ನಿಂತು ಅವರೆಲ್ಲ ಬಿಸಿಲೂರಿನ ಬಿಳಿ ಜೋಳದ ಖಡಕ್ ರೊಟ್ಟಿ ತಿಂದ್ರು..
ಕೇಳೋಕೆ ಅಚ್ಚರಿ ಆಗ್ಬಹುದು ಅದಕ್ಕೂ ಕಾರಣವಿದೆ.. ಕಲಬುರಗಿ ರೊಟ್ಟಿಗೆ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಲು ಜಿಲ್ಲಾಡಳಿತ ರೊಟ್ಟಿಯನ್ನ ಬ್ರಾಂಡಿಂಗ್ ಮಾಡುತ್ತಿದೆ..
ಹೀಗಾಗಿ ಹೊಸ ಪ್ಯಾಕ್ ಹೊಸ ಲೆಬಲ್ ಇರೋ ರೊಟ್ಟಿಯನ್ನ ಇವತ್ತು ನಡೆದ ಗ್ಯಾರಂಟಿ ಸಮಾವೇಶದಲ್ಲಿ ಬಿಡುಗಡೆ ಮಾಡಲಾಯಿತು. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ DCM ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ರೊಟ್ಟಿ ರಿಲೀಸ್ ಮಾಡಿ ನಂತ್ರ ನಿಂತಲ್ಲೇ ರೊಟ್ಟಿ ಟೇಸ್ಟ್ ಮಾಡಿದ್ರು..