ಕಲಬುರ್ಗಿ: ಹಾಲು ತರಲು ಹೋಗಿದ್ದ 5 ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ಕಲಬುರಗಿ ಜಿಲ್ಲೆಯ ಮಿಸ್ಬಾನಗರದಲ್ಲಿ ಘಟನೆ ನಡೆದಿದ್ದು, ರಶೀದ್ ಅಶ್ಫಕ್ ಎಂಬ ಬಾಲಕ ಮೇಲೆ ಬೀದಿನಾಯಿಗಳು ಎರಗಿದ್ವು. ಇನ್ನೂ ಗಾಯಗೊಂಡ ರಶೀದ್ ಅಶ್ಫಕ್ನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. \
ಕಳೆದ ವಾರದಿಂದ 2 ಘಟನೆ ನಡೆದರೂ ನಗರ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಇದ್ರಿಂದ ಅಧಿಕಾರಿಗಳ ವಿರುದ್ಧ ಮಿಸ್ಬಾನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ರು.