ಕಲಬುರಗಿ: ಸಂವಿಧಾನ ಬದಲಾವಣೆ ಮಾಡ್ತೀವಿ ಅನ್ನೋ ಹೇಳಿಕೆ ಕೊಡುವ ಸಂಸದ ಅನಂತ ಕುಮಾರ್ ಹೆಗಡೆಯವರನ್ನ ಬಿಜೆಪಿ ಗಡಿಪಾರು ಮಾಡಬೇಕು ಅಂತ MLC ತಿಪ್ಪಣ್ಣಪ್ಪ ಕಮಕನೂರ್ ಹೇಳಿದ್ದಾರೆ.
ಕಲಬುರಗಿಯ ವಾಡಿ ಪಟ್ಟಣದಲ್ಲಿ ನಡೆದ ಸಂವಿಧಾನ ಜಾಗೃತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಮಕನೂರ್ ಈ ಕೂಡಲೇ ಬಿಜೆಪಿ ಗಡಿಪಾರು ಮಾಡದಿದ್ರೆ ರಾಜ್ಯದಲ್ಲಿ ಕ್ರಾಂತಿಕಾರಿ ಹೋರಾಟ ಮಾಡಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ರು..