ಕಲಬುರಗಿ:- ಬುರ್ಖಾ ಧರಿಸಿಕೊಂಡು ಗಿರಾಕಿ ತರ ಬಂದ ಇಬ್ಬರು ಚಾಲಾಕಿ ಲೇಡಿಗಳು ಚಿನ್ನದ ಬಳೆ ಕದ್ಕೊಂಡು ಹೋದ ಘಟನೆ ಕಲಬುರಗಿಯಲ್ಲಿ ನಡೆದಿದೆ..
ನಗರದ ಮಲಬಾರ್ ಗೋಲ್ಡ್ ಶೋರೂಮಲ್ಲಿ ಘಟನೆ ನಡೆದಿದ್ದು 30 ಗ್ರಾಂ ಚಿನ್ನದ ಬಳೆಗಳನ್ನ ಎಗರಿಸಿ ಎಸ್ಕೇಪ್ ಆಗಿದ್ದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಸೇಲ್ಸ್ ಮ್ಯಾನ್ ಚಂದ್ರಕಾಂತ ನೀಡಿದ ದೂರಿನನ್ವಯ ಸ್ಟೇಷನ್ ಬಜಾರ್ ಪೋಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ..ಚಾಲಾಕಿಗಳ ಪತ್ತೆಗೆ ಪೋಲೀಸ್ರು ಬಲೆ ಬೀಸಿದ್ದಾರೆ…