ವಿಜಯಪುರ:- ಕೈ ನಾಯಕರಿಂದ ಬಾಂಗ್ಲಾದ ಸ್ಥಿತಿ ಕರ್ನಾಟಕಕ್ಕೂ ಬರಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ..
ಕಾಂಗ್ರೆಸ್ನವರ ಕಾರಣದಿಂದ ಬಾಂಗ್ಲಾ ದೇಶದಂತೆ ಇಲ್ಲಿಯೂ ದಂಗೆ ಆಗುತ್ತದೆ. ಪಶ್ವಿಮ ಬಂಗಾಳದಲ್ಲಿ ದೆವ್ವವೊಂದು ಅಧಿಕಾರದಲ್ಲಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಮುಸ್ಲಿಂ ಜಾತಿಯಲ್ಲಾದರೂ ಹುಟ್ಟಬೇಕಿತ್ತು. ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆಗಿ ಕೊಲೆಯಾದರೂ ಮಹಿಳೆಯಾಗಿರೋ ಆ ಮುಖ್ಯಮಂತ್ರಿ ಮರುಕ ವ್ಯಕ್ಯಪಡಿಸಲಿಲ್ಲ ಎಂದು ಟೀಕಿಸಿದ್ದಾರೆ.
ಸಿಎಂ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಇಳಿಸಿದರೆ ಪ್ರಧಾನಿ ನರೇಂದ್ರ ಮೋದಿಯವರ ಮನೆಗೆ ಹೋಗುತ್ತೇವೆ ಎಂದು ರೋಣ ಶಾಸಕ ಹೇಳುತ್ತಾರೆ. ಈ ಕಾಂಗ್ರೆಸ್ನವರಿಗೆ ಮೋದಿ ಮನೆಗೆ ಹೋಗಲು ಅಸಾಧ್ಯ. ಅವರ ಸುತ್ತ ಸೈನ್ಯ ಇದೆ, ಪೊಲೀಸ್ ಇಲಾಖೆಯಿದೆ. ಭಾರತದಲ್ಲಿ ಜೀವಂತ ಹಿಂದೂಗಳಿದ್ದಾರೆ. ಪ್ರಧಾನಿ ಮೋದಿ ಮನೆಗೆ ನುಗ್ಗಿದರೆ ಕಾಂಗ್ರೆಸ್ನವರು ಯಾರೂ ಉಳಿಯಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಮೀಸಲಾತಿಯನ್ನೇ ತೆಗೆದು ಹಾಕುತ್ತೇನೆ ಎಂದು ರಾಹುಲ್ ಗಾಂಧಿ ಹೇಳುತ್ತಾನೆ. ಈ ಬಗ್ಗೆ ದಲಿತರು ಚಿಂತಿಸಬೇಕು. ಇಷ್ಟು ದಿನ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದರು. ಬಿಜೆಪಿ ಬಂದರೆ ಮೀಸಲಾತಿ ತೆಗೆದು ಹಾಕುತ್ತಾರೆ, ದಲಿತರ ಹಕ್ಕು ಕಸಿದುಕೊಳ್ಳುತ್ತಾರೆ, ಸಂವಿಧಾನ ಬದಲಾವಣೆ ಆಗುತ್ತದೆ ಎಂದು ಹೇಳುತ್ತಿದ್ದರು. ಆದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 10 ವರ್ಷ ಆಯ್ತು. ಈ ಮೊದಲು ಅಟಲ್ ಬಿಹಾರಿ ವಾಜಪೇಯಿಯವರು ಕೂಡ ಪ್ರಧಾನಿಯಾಗಿದ್ದರು. ನಾವೇನಾದರೂ ಸಂವಿಧಾನವನ್ನು ಮುಟ್ಟಿದ್ದೇವಾ? ನಾವು ಸಂವಿಧಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.