ಮಂಡ್ಯ: 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಮದ್ದೂರು ಪಟ್ಟಣದ ಮತಘಟ್ಟ ಸಂಖ್ಯೆ 109 ಕ್ಕೆ ಭೇಟಿ ನೀಡಿದರು.
ರಾಜ್ಯಕ್ಕೆ “ರಾಗಾ” ಎಂಟ್ರಿ: ಗಣಿನಾಡಲ್ಲಿ ಇಂದು ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ!
ಮದ್ದೂರಿನ ಮತಗಟ್ಟೆಗಳಿಗೆ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಭೇಟಿ ನೀಡಿದ್ದು, ಜನರ ಮತದಾನ ವೀಕ್ಷಣೆ ಮಾಡಿ ಗೆಲುವಿನ ಭರವಸೆ ನೀಡಿದ್ದಾರೆ. ಮದ್ದೂರು ಪಟ್ಟಣದ ಮತಗಟ್ಟೆ 109 ಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಈ ಬಾರಿ ಜನರ ಸೇವೆಗೆ ಜಿಲ್ಲೆಯ ಮತದಾರರಿಗೆ ಒಂದು ಅವಕಾಶ ಕೇಳಿದ್ದೀನಿ. ಕಳೆದ ಎರಡು ತಿಂಗಳಿನಿಂದ ಸತತವಾಗಿ ಕ್ಷೇತ್ರದಲ್ಲಿ ಓಡಾಡಿ ಜನರ ಸೇವೆಗೆ ಮತ ಕೇಳಿದ್ದೀನಿ. ಜಿಲ್ಲೆಯ ಜನರು ಕೈ ಹಿಡಿದು ಗೆಲ್ಲಿಸುವ ವಿಶ್ವಾಸ ಇದೆ ಎಂದ ಕೈ ಅಭ್ಯರ್ಥಿ ಹೇಳಿದ್ದಾರೆ. ಇದೇ ವೇಳೆ ಕದಲೂರು ಉದಯ್ ಸಾಥ್ ಕೊಟ್ಟಿದ್ದಾರೆ.
ಸ್ವಗ್ರಾಮ ಕದಲೂರು ಗ್ರಾಮದಲ್ಲಿ ಉದಯ್ ಅವರು, ಪತ್ನಿ ಸಮೇತ ಬಂದು ಹಕ್ಕು ಚಲಾವಣೆ ಮಾಡಿದ್ದಾರೆ. ಮದ್ದೂರು ತಾಲೂಕಿನ ಕದಲೂರು ಮತಗಟ್ಟೆ ಸಂಖ್ಯ59 ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ.
ಕದಲೂರು ಗ್ರಾಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಜರುಗಿದೆ ಎನ್ನಲಾಗಿದೆ