ಹುಬ್ಬಳ್ಳಿ: ರಾಜ್ಯಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದ ಕಾರಣ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಎಮ್ಎಲ್ಸಿ ಕೂಡ ಆಗುತ್ತಾರೆ. ಆದ್ರೆ ಇಂದು ಏಕಾಏಕಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಬಿಟ್ಟು ಮರಳಿ ತಮ್ಮ ಬಿಜೆಪಿ ಪಕ್ಷಕ್ಕೆ ಸೇರಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಶೆಟ್ಟರ್ ಅವರ ಭಾವಚಿತ್ರಕ್ಕೆ ಪಟಾಕಿ ಸಿಡಿಸಿ,
Pakistan: ಪಾಕ್ʼಗೆ ಹೊಟ್ಟೆ ಕಿಚ್ಚು ಶುರು: ರಾಮಮಂದಿರ ಉದ್ಘಾಟನೆ ಬಗ್ಗೆ ಪಾಕಿಸ್ತಾನ ಹೇಳಿದ್ದೇನು..?
ಹೋಯ್ತು ಹೋಯ್ತು ಪೀಡಾ ಹೋಯ್ತು ಎಂದು ಘೋಷಣೆ ಕೂಗುತ್ತ, ಸಿಹಿ ತಿನ್ನಿಸುತ್ತ ವಿಜಯೋತ್ಸವ ಆಚರಸಿದರು. ನಗರದ ಚನ್ನಮ್ಮ ಸರ್ಕಲ್ ನಲ್ಲಿ ಜಗದೀಶ್ ಶೆಟ್ಟರ್ ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕಿ ತಮ್ಮ ಆಕ್ರೋಶ ಹೊರ ಹಾಕಿದ್ದು ಅಲ್ಲದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಲು ಶೆಟ್ಟರ್ ಬಂದಿದ್ದರು. ಪೀಡಾ ಹೋಯ್ತು ಎಂದು ತಮ್ಮ ಆಕ್ರೋಶ ಹೊರ ಹಾಕಿದರು.