ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಗಂಡಾಂತರಕ್ಕೆ ಹತ್ತಿರವಾಗುತ್ತಿದೆ. ಮಿತಿಮೀರಿದ ನಗರೀಕರಣದಿಂದಾಗಿ ಪ್ರಕೃತಿಯೇ ಮಾಯವಾಗಿ ಪ್ರಾಕೃತಿಕ ವಿಕೋಪಕ್ಕೆ ಕಾರಣಮವಾಗುತ್ತಿದೆ. ಇದರ ಮಧ್ಯೆಯೇ ಜಲಸಂಪನ್ಮೂಲ ಇಲಾಖೆ ನೀಡಿರುವ ಮಾಹಿತಿ ನಗರದ ಮೇಲ್ಮೈ ಜಲಸಂಪನ್ಮೂಲ ಯಾವ ರೀತಿ ಹದಗೆಟ್ಟಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ.
ಬೆಂಗಳೂರಲ್ಲಿ ಫೆ.14ಕ್ಕೆ ಮದ್ಯ ಮಾರಾಟಕ್ಕೆ ಬ್ರೇಕ್ : ಪ್ರೇಮಿಗಳಿಗೆ ಫುಲ್ ಶಾಕ್!
ಹೌದು, ಬೆಂಗಳೂರು ಈಗಾಗಲೇ ಮಹಾನಗರವಾಗಿ ಬೆಳೆದಿದ್ದು, ಸುಮಾರು 1.30 ಕೋಟಿಗೂ ಹೆಚ್ಚು ಜನಸಂಖ್ಯೆಗೆ ಮೂಲಭೂತ ಸೌಕರ್ಯ ಒದಗಿಸೋಕೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಅದರಲ್ಲಿಯೂ ಜೀವನ ನಡೆಸಲು ಅತ್ಯಗತ್ಯವಾಗಿ ಬೇಕಾದ ನೀರನ್ನು ಹೊಂದಿಸುವುದು ಇನ್ನಷ್ಟು ಕಷ್ಟಕರವಾಗ್ತಿದೆ. ಇತ್ತ ನೀರು ಪೂರೈಕೆಗೆ ಕಾವೇರಿ ನೀರು ಬಿಟ್ಟರೆ ಜಲಮಂಡಳಿಗೆ ಪರ್ಯಾಯ ಮೂಲಗಳೇ ಇಲ್ಲವಾಗುತ್ತಿದೆ. ಇದರ ಮಧ್ಯೆಯೇ ಮೇಲ್ಮೈ ಜಲಸಂಪನ್ಮೂಲದ ಸ್ಥಿತಿ ಗತಿ ಬಗ್ಗೆ ಜಲಸಂಪನ್ಮೂಲ ಇಲಾಖೆ ನೀಡಿರುವ ಮಾಹಿತಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಏನೆಂದರೆ 2022ರಿಂದ 2023ರವರಿಗೆ ಬರೋಬ್ಬರಿ ಶೇಕಡಾ. 47ರಷ್ಟು ಮಳೆಯ ಪ್ರಮಾಣ ಕುಸಿತವಾಗಿದೆ ಅನ್ನೋದು.
( ಅಳತೆ ಮಿಲಿ ಮೀಟರ್ ಗಳಲ್ಲಿ )
ಮಳೆಯ ಪ್ರಮಾಣದ ಸ್ಥಿತಿಗತಿ ( ಹೆಡರ್ )
ವಲಯ – 2022 – 2023
ಆನೇಕಲ್ – 894 – 639
ಅತ್ತಿಬೆಲೆ – 1,273 – 522
ಬೇಗೂರು – 2648 – 914
ಚಿಕ್ಕಜಾಲ – 1657 – 758
ಜಿಗಣಿ – 1716 – 880
ಕಾಡುಗೋಡಿ – 840 – 666
ಕೆಂಗೇರಿ – 1918 – 959
K.R ಪುರ – 1463 – 630
ಸರ್ಜಾಪುರ – 1180 – 747
ತಾವರೆಕೆರೆ – 1449 – 658
ಟಿಜಿ ಹಳ್ಳಿ – 279 – 517
ಉತ್ತರಹಳ್ಳಿ – 1,430 – 875
ವರ್ತೂರು – 1138 – 632
ಯಲಹಂಕ – 1416 – 799
ಒಟ್ಟು – 1,378 – 728 ( ವಾರ್ಷಿಕ ಸರಾಸರಿ )
2022ನೇ ಸಾಲಿನಲ್ಲಿ ಎಲ್ಲ ವಲಯಗಳಲ್ಲಿ ಸರಾಸರಿ 1,378 ಮಿಲಿ ಮೀಟರ್ ಮಳೆ, ಆದರೆ 2023ರಲ್ಲಿ ಪ್ರತಿ ವಲಯದಲ್ಲಿ ವಾರ್ಷಿಕ ಸರಾಸರಿ ಮಳೆ ಕೇವಲ 728 ಮಿಲಿ ಮೀಟರ್ ಅಂದರೆ ಆಘಾತಕಾರಿ ವಿಷಯವೇ. ಒಟ್ಟಾರೆ ನಗರಕ್ಕೆ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಇಷ್ಟು ಪ್ರಮಾಣದಲ್ಲಿ ಕುಸಿದಿರೋದನ್ನ ನೋಡಿದರೆ ನಿಜಕ್ಕೂ ಆತಂಕವಾಗುತ್ತೆ. ಸರಿಯಾಗಿ ಮಳೆ ಬಾರದೇ ಇದ್ದರೆ ನಗರದ ಮೇಲ್ಮೈ ಸಂಪನ್ಮೂಲದ ಗತಿಯೇನು..? ಅಂತರ್ಜಲವನ್ನಾದರೂ ಹೇಗೆ ನಂಬೋದು ಸಹ ಯಕ್ಷಪ್ರಶ್ನೆಯಾಗುತ್ತಿದೆ. ಹೀಗಾಗಿ ಇನ್ನಾದರೂ ಮರಗಳನ್ನ ಸಂರಕ್ಷಣೆ ಮಾಡೋ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಲಿ. ಅಭಿವೃದ್ಧಿ ಹೆಸರಲ್ಲಿ ಉಸಿರಿಗೇ ಸಂಚಕಾರ ತಂದು, ಮರುಭೂಮಿಯಂತಾಗೋದನ್ನ ಎಲ್ಲರೂ ತಡೆಗಟ್ಟೋಣ.