ದೇಹದ ಬೊಜ್ಜು ಕರಗಿಸುವುದು ಸವಾಲಿನ ಕೆಲಸವಾದರೂ ಕೂಡ ದಿನನಿತ್ಯ ವ್ಯಾಯಾಮ ಕ್ರಮವನ್ನು ಪಾಲಿಸಿದರೆ ನೀವು ಬಯಸಿದ ಆಕಾರದ ದೇಹವನ್ನು ಪಡೆಯ ಬಹುದು.
ಬಳ್ಳಾರಿಯ ಬಿಮ್ಸ್ನಲ್ಲಿ ನಾಲ್ವರು ಬಾಣಂತಿಯರ ಸಾವು ಪ್ರಕರಣ: ಐವಿ ಫ್ಲೂಯಿಡ್ ವರದಿಯಲ್ಲಿ ಶಾಕಿಂಗ್ ನ್ಯೂಸ್ ಬಹಿರಂಗ!
ಹೊಟ್ಟೆ ತುಂಬಾ ಬೊಜ್ಜು ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವುದು ಸಹಜ. ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿ ಕೊಳ್ಳುವುದು. ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ. ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು. ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಹೀಗಾಗಿ ವಾಕಿಂಗ್ ಮಾಡೋದ್ರಿಂದ ಸಿಗುವ ಬೆನಿಫಿಟ್ ಇಲ್ಲಿದೆ.
ವಾಕಿಂಗ್ ಹೊಟ್ಟೆಯ ಕೊಬ್ಬನ್ನು ಹೇಗೆ ಬರ್ನ್ ಮಾಡುತ್ತದೆ:-
ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ
ಬೆಳಗಿನ ನಡಿಗೆಯು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ನೀವು ನಡೆಯುವಾಗ, ನಿಮ್ಮ ದೇಹವು ನಿಮ್ಮ ಚಲನೆಯನ್ನು ಉತ್ತೇಜಿಸಲು ಕ್ಯಾಲೊರಿಗಳ ರೂಪದಲ್ಲಿ ಸಂಗ್ರಹವಾಗಿರುವ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ನೀವು ಹೆಚ್ಚು ವಾಕ್ ಮಾಡಿದಂತೆ ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ.
ಚಯಾಪಚಯವನ್ನು ಹೆಚ್ಚಿಸುತ್ತದೆ
ನಿಯಮಿತ ವಾಕಿಂಗ್ ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ನೀವು ವಾಕಿಂಗ್ನಂತಹ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸಿದಾಗ, ನಿಮ್ಮ ದೇಹವು ಅದರ ಚಯಾಪಚಯ ದರವನ್ನು ಹೆಚ್ಚಿಸುವ ಮೂಲಕ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ. ಈ ಮೂಲಕ ವಾಕಿಂಗ್ ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಮ್ಮಿ ಮಾಡುತ್ತದೆ.
ಒತ್ತಡವನ್ನು ದೂರ ಇಡುತ್ತದೆ
ವಾಕಿಂಗ್ ಒತ್ತಡವನ್ನು ನಿವಾರಿಸಲು ಇರುವ ಅತ್ಯುತ್ತಮ ವಿಧಾನವಾಗಿದೆ. ನಿಮಗೆ ಸ್ಟ್ರೆಸ್ ಆದಾಗ ನಿಮ್ಮ ದೇಹವು ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುತ್ತದೆ, ಹೆಚ್ಚಿದ ಕಾರ್ಟಿಸೋಲ್ ಮಟ್ಟಗಳು ಹೊಟ್ಟೆಯ ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸಬಹುದು. ಆದ್ದರಿಂದ ಸ್ಟ್ರೆಸ್ ನಿವಾರಿಸಲು ವಾಕಿಂಗ್ ಮಾಡಿದರೆ, ಇದರಿಂದ ಬರುವ ಹೆಚ್ಚುವರಿ ತೂಕವನ್ನು ದೂರ ಮಾಡಬಹುದು.
ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ
ನಿಯಮಿತ ನಡಿಗೆಯು ಇನ್ಸುಲಿನ್ಗೆ ನಿಮ್ಮ ಜೀವಕೋಶಗಳ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ, ಇದು ಉತ್ತಮ ಗ್ಲೂಕೋಸ್ ನಿಯಂತ್ರಣಕ್ಕೆ ಕಾರಣವಾಗುತ್ತದೆ ಮತ್ತು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಹೇಗೆ ನಡೆಯಬೇಕು?
ತೀವ್ರತೆಯನ್ನು ಹೆಚ್ಚಿಸಿ
ನಿಮ್ಮ ವಾಕಿಂಗ್ ಅನ್ನು ಗರಿಷ್ಠಗೊಳಿಸಲು, ನಿಮ್ಮ ಹೃದಯ ಬಡಿತ ಮತ್ತು ಉಸಿರಾಟವನ್ನು ಹೆಚ್ಚಿಸುವ ವೇಗವನ್ನು ಗುರಿಯಾಗಿರಿಸಿಕೊಳ್ಳಿ.ಈ ಮಧ್ಯಂತರ ತರಬೇತಿ ವಿಧಾನವು ಕ್ಯಾಲೋರಿ ಬರ್ನ್ ಅನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಮಯ ಹೆಚ್ಚಿಸಿ
ವಾರದ ಹೆಚ್ಚಿನ ದಿನಗಳಲ್ಲಿ 30 ನಿಮಿಷಗಳ ವೇಗದ ನಡಿಗೆಯ ಗುರಿಯನ್ನು ಹೊಂದಿರಿ. ನೀವು ಸದೃಢರಾಗುತ್ತಿದ್ದಂತೆ ನಿಮ್ಮ ನಡಿಗೆಯ ಅವಧಿಯನ್ನು ಕ್ರಮೇಣ ಹೆಚ್ಚಿಸಿ. ಹೊಟ್ಟೆಯ ಕೊಬ್ಬನ್ನು ನಿವಾರಿಸಲು ಇದು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ಚುರುಕಾದ ನಡಿಗೆ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ, ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ