ಹೈದರಾಬಾದ್:- ವಿಜಯವಾಡ ಭೇಟಿ ವೇಳೆ ಕೂದಲೆಳೆ ಅಂತರದಲ್ಲಿ ರೈಲು ಅಪಘಾತದಿಂದ ಸಿಎಂ ಚಂದ್ರಬಾಬು ನಾಯ್ಡು ಪಾರಾಗಿದ್ದಾರೆ.
ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ತಂಡವು ರೈಲ್ವೇ ಹಳಿಯೊಂದರ ಕೆಳಗೆ ಜಲಾವೃತಗೊಂಡಿರುವ ಹೊಳೆಯನ್ನು ವೀಕ್ಷಿಸಲು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ರೈಲ್ವೆ ಹಳಿಯ ಮೇಲೆ ರೈಲು ಬಂದಿದೆ. ಆ ವೇಳೆ ಈ ಘಟನೆ ಸಂಭವಿಸಿದೆ.
ಇದ್ದಕ್ಕಿದ್ದಂತೆ, ಒಂದು ರೈಲು ವಿರುದ್ಧ ದಿಕ್ಕಿನಿಂದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸಮೀಪಿಸಿತು. ಆಗ ಅವರ ಜೊತೆಗಿದ್ದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ರೈಲು ಮಾರ್ಗದಿಂದ ತ್ವರಿತವಾಗಿ ಹಿಂದೆ ಸರಿದಿದ್ದರಿಂದ ದುರಂತವೊಂದು ತಪ್ಪಿದಂತಾಗಿದೆ. ರೈಲು ಹಾದುಹೋದ ನಂತರ, ಆ ತಂಡವು ತಮ್ಮ ತಪಾಸಣೆಯನ್ನು ಮುಂದುವರೆಸಿತು.
ಸಿಎಂ ಚಂದ್ರಬಾಬು ನಾಯ್ಡು ಅವರು ಕಳೆದ ಕೆಲವು ದಿನಗಳಿಂದ ವಿಜಯವಾಡದಲ್ಲಿಯೇ ಉಳಿದುಕೊಂಡಿದ್ದು, ನಗರ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮತ್ತು ಪರಿಹಾರ ಪ್ರಯತ್ನಗಳು ಮುಂದುವರಿದಿವೆ.