ವಿಜಯಪುರ:- ಮುತ್ತು ನಮಗೆ ಕೊಡ್ಬೇಡಿ, ಸಾಬ್ರಿಗೆ ಕೊಟ್ಕೊಂಡಿರಿ ಎಂದು ಸಚಿವ ಜಿ ಪರಮೇಶ್ವರ್ಗೆ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.
ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ: ಸಿ.ಎಂ.ಬಣ್ಣನೆ
ಈ ಸಂಬಂಧ ಮಾತನಾಡಿದ ಅವರು, ನಕ್ಸಲರಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದು ತಪ್ಪು. ಈ ನಕ್ಸಲರಿಂದ ಎಷ್ಟು ಪೊಲೀಸ್ ಅಧಿಕಾರಿಗಳು ಪ್ರಾಣ ಕೊಟ್ಟಿದ್ದಾರೆ. ಎಷ್ಟೋ ರೈತರ, ಸಾಮಾನ್ಯ ಜನರ ಹತ್ಯೆ ಮಾಡಿದ್ದಾರೆ. ನಕ್ಸಲರಿಗೆ ಏನು ಕೊಡಬೇಕು ಎಂದು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಅವರು ಎಲ್ಲೆಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿದ್ದಾರೆ ಅವುಗಳನ್ನು ಮುಂದಿಟ್ಟು ಶರಣಾಗಬೇಕಿತ್ತು. ಆದರೆ ಸಿದ್ಧರಾಮಯ್ಯ ಅವರೇ ನಕ್ಸಲರಿಗೆ ಶರಣಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇವತ್ತು ಶರಣಾಗಿ ನಾಳೆ ಶಸ್ತ್ರಾಸ್ತ್ರಗಳನ್ನು ತಂದು ಕೊಡಿ ಎಂದು ಹೇಳಿರಬೇಕು. ಮುಂದಿನ ದಿನಗಳಲ್ಲಿ ಇದೊಂದು ಸ್ಟೈಲ್ ಆಗುತ್ತದೆ. ಕೆಲ ದಿನ ಬಂದೂಕು ಹಾಕಿಕೊಂಡು ಓಡಾಡುತ್ತಾರೆ. ನಂತರ 6 ತಿಂಗಳು ಮಾಯ ಆಗುತ್ತಾರೆ. ಬಳಿಕ ಶರಣಾಗುತ್ತಾರೆ. ಅವರಿಗೆಲ್ಲ ವಿಶೇಷ ಪ್ಯಾಕೇಜ್ ಕೊಡುತ್ತೀರಾ? ಹಾಗಾದರೆ ಪೋಲಿಸರ ಕುಟುಂಗಳಿಗೆ ಏನು ಹೇಳ್ತಿರಿ? ಅವರಿಂದ ಹತ್ಯೆಯಾದ ಪೊಲೀಸರು, ನಾಗರಿಕರಿಗೆ ಏನು ಕೊಟ್ಟಿದ್ದೀರಿ? ನಕ್ಸಲರು ಮುಖ್ಯವಾಹಿನಿಗೆ ಬರಬೇಕು ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕಾನೂನು ಪ್ರಕಾರ ಬರಬೇಕು ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.