ಹುಬ್ಬಳ್ಳಿ: ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗ್ತಿದೆ. 6 ಸಾವಿರ ಕೋಟಿಗೂ ಅಧಿಕ ಹಣ ಬಿಜೆಪಿಗೆ ದೇಣಿಗೆ ಹೋಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ‘ಚುನಾವಣೆ ದಿನಾಂಕ ಕೂಡ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ ಎನ್ನುವುದು ಪ್ರಶ್ನೆಯಾಗಿದೆ. ಚುನಾವಣಾ ಆಯೋಗದ ಅಧಿಕಾರಿ ರಾಜೀನಾಮೆ ನೀಡಿರೋದು ಇದಕ್ಕೆಲ್ಲ ಕಾರಣ” ಎಂದರು.
“ಮೋದಿ ಸರ್ಕಾರ ಬಂದ ಮೇಲೆ ನ್ಯಾಯಾಧೀಶರನ್ನು ಹೊರಹಾಕಿದ್ದಾರೆ. ಚುನಾವಣಾ ಆಯೋಗದಿಂದ ಹೊರಹಾಕಿದ್ದಾರೆ. ಹೀಗಾಗಿ ನಿಷ್ಪಕ್ಷಪಾತ ಆಗೋಕೆ ಎಲ್ಲಿ ಸಾಧ್ಯ? ಸ್ವಾಯತ್ತ ಸಂಸ್ಥೆಗಳು ಬಿಜೆಪಿ ಅನುಸಾರ ನಡೆಯಬೇಕು. ಇದು ದೇಶದಲ್ಲಿ ನಡೆಯುತ್ತಿದೆ. ಆಯೋಗ, ಸಂಸ್ಥೆ ಎಲ್ಲವೂ ಬಿಜೆಪಿ ಪರವಾಗಿದೆ. ಇದರಲ್ಲಿ ಚುನಾವಣಾ ಆಯೋಗವೂ ಒಂದು. ಚುನಾವಣಾ ಆಯೋಗ ಬಿಜೆಪಿ ಪರವಾಗಿದೆ ಎಂದು ಪರೋಕ್ಷವಾಗಿ ವಾಗ್ದಾಳಿ” ನಡೆಸಿದರು.
ಬೆಚ್ಚಗಿನ ಹಾಲಿಗೆ ಒಂದು ಚಮಚ ಜೇನು ಬೆರೆಸಿ ಕುಡಿಯುವುದರಿಂದ ಸಿಗುವ ಪ್ರಯೋಜನ!
“ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗ್ತಿದೆ. 6 ಸಾವಿರ ಕೋಟಿಗೂ ಅಧಿಕ ಹಣ ಬಿಜೆಪಿಗೆ ದೇಣಿಗೆ ಹೋಗಿದೆ. ಬಿಜೆಪಿ ಪಕ್ಷಕ್ಕೆ ಅನೇಕ ದೊಡ್ಡ ದೊಡ್ಡ ಕಂಪನಿಗಳು ದೇಣಿಗೆ ಕೊಟ್ಟಿವೆ. ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತಿದೆ, ಇದು ಭ್ರಷ್ಟಾಚಾರದ ಪರಮಾವಾಧಿ. ಅತ್ಯಂತ ಭ್ರಷ್ಟ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. ನಮ್ಮ ಮುಂದೆ ಯಾರೂ ನಿಲ್ಲಬಾರದು ಅನ್ನೋದು ಇವರ ಉದ್ದೇಶ. ಪಕ್ಷಾಂತರ ಮಾಡಲು ಇಡಿ,
ಐಟಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಮಾತನಾಡೋಕೆ ನೈತಿಕತೆ ಇಲ್ಲ. ಎಲ್ಲ ಕಡೆ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ದಿನವೂ ಕಾಂಗ್ರೆಸ್ ನಾಯಕರ ಮನೆ ಮೇಲೆ ರೈಡ್ ಆಗುತ್ತಿದೆ. ಈ ತರಹದ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. ಚುನಾವಣಾ ಬಾಂಡ್ನಿಂದ ಅನೇಕ ವಿಚಾರ ಹೊರ ಬರುತ್ತದೆ. ಅದನ್ನು ಮುಚ್ಚಿಹಾಕಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ” ಎಂದರು.