ಇತ್ತೀಚೆಗೆ ಜೂನಿಯರ್ ಎನ್ ಟಿ ಆರ್ ನಟನೆಯ ‘ದೇವರ’ ಸಿನಿಮಾ ತೆರೆಕಂಡಿತ್ತು. RRR ಸಿನಿಮಾ ಬಳಿಕ ತೆರೆಕಾಣುತ್ತಿರುವ ಕಾರಣಕ್ಕೆ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿತ್ತು. ಇದು ಜೂ.ಎನ್ಟಿಆರ್ ನಟನೆಯ ಎರಡನೇ ಪ್ಯಾನ್ ಇಂಡಿಯಾ ಸಿನಿಮಾ. ಆದರೆ ಚಿತ್ರಕ್ಕೆ ಮೊದಲ ದಿನವೇ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
‘ದೇವರ’ ಬ್ಲಾಕ್ ಬಸ್ಟರ್ ಸಿನಿಮಾಗಳ ಪಟ್ಟಿ ಸೇರಿಕೊಂಡಿದೆ. ಈ ವರ್ಷ ರಿಲೀಸ್ ಆದ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ‘ದೇವರ’ ಸಿನಿಮಾ ಕೂಡ ಇದೆ. ಜೂ.ಎನ್ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ಮತ್ತೆ ವರ್ಕ್ ಆಗಿದೆ. ಇದೇ ಬೆನ್ನಲ್ಲೇ ‘ದೇವರ ಪಾರ್ಟ್ 2’ ಕೂಡ ಟೇಕಾಫ್ ಆಗುತ್ತಾ ಅಂತ ಜೂ.ಎನ್ಟಿಆರ್ ಫ್ಯಾನ್ಸ್ ಕಾಯುತ್ತಿದ್ದಾರೆ. ಆದ್ರೆ ಈ ಮಧ್ಯೆ ನಿರ್ಮಾಪಕರೊಬ್ಬರು ಅಸಮಾಧಾನ ಹೊರ ಹಾಕಿದ್ದಾರೆ.
‘ದೇವರ’ ಬ್ಲಾಕ್ ಬಸ್ಟರ್ ಲಿಸ್ಟ್ ಏನೋ ಸೇರಿದೆ. ಆದರೆ ಈ ನಿರ್ಮಾಪಕ ಮಾತ್ರ ದೇವರ ಚಿತ್ರದಿಂದ ನಷ್ಟ ಅನುಭವಿಸಿದ್ದೇನೆ ಎಂದು ಹೇಳಿ ಬೇಸರ ಹೊರಹಾಕಿದ್ದಾರೆ. ಈ ಹೇಳಿಕ ಸದ್ಯ ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಹೇಳಿಕೆ ನೀಡಿರುವ ನಿರ್ಮಾಪಕನಿಗೂ ಹಾಗೂ ದೇವರ ಸಿನಿಮಾಗೂ ಯವುದೇ ಸಂಬಂಧ ಇಲ್ಲ.
ಟಾಲಿವುಡ್ನಲ್ಲಿ ಈ ಟಿವಿ ಪ್ರಭಾಕರ್ ಅಂತಲೇ ಜನಪ್ರಿಯರಾಗಿರುವ ನಿರ್ಮಾಪಕ ‘ರಾಮ್ ನಗರ ಬನ್ನಿ’ ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಮೂಲಕ ತಮ್ಮ ಪುತ್ರ ಚಂದ್ರಹಾಸ್ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯ ಮಾಡಿದ್ದರು. ಮಗನ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣಮಾಡಿದ್ದರು.
‘ರಾಮ್ ನಗರ ಬನ್ನಿ’ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಆದರೆ, ಬಾಕ್ಸಾಫೀಸ್ನಲ್ಲಿ ಮಾತ್ರ ಉತ್ತಮ ಗಳಿಕೆ ಮಾಡುವಲ್ಲಿ ಸಾಧ್ಯವಾಗಲಿಲ್ಲ. ತಮ್ಮ ಪುತ್ರನ ಸಿನಿಮಾ ರಿಲೀಸ್ ಆದಾಗ ಎಲ್ಲರೂ ಇಷ್ಟ ಪಟ್ಟಿದ್ದರು. ಮಗನ ಅಭಿನಯದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದರು. ಆದರೆ, ಅದು ಬಾಕ್ಸಾಫೀಸ್ ಸಕ್ಸಸ್ ಆಗಿ ಕನ್ವರ್ಟ್ ಆಗಿಲ್ಲ ಎಂದಿದ್ದಾರೆ.
‘ರಾಮ್ ನಗರ ಬನ್ನಿ’ ಚಿತ್ರಕ್ಕೆ ಸಿಕ್ಕಿದ ಪ್ರತಿಕ್ರಿಯೆ ನೋಡಿ ಕಲೆಕ್ಷನ್ ಕೂಡ ಅದ್ಭುತವಾಗಿರುತ್ತೆ ಎಂದು ನಂಬಿದ್ದೆ. ಆದರೆ, ‘ದೇವರ’ ಸಿನಿಮಾ ರಿಲೀಸ್ ಆಗಿದ್ದರಿಂದ ನಮ್ಮ ಸಿನಿಮಾದ ಕಲೆಕ್ಷನ್ಗೆ ದೊಡ್ಡ ಹೊಡೆತ ಬಿದ್ದಿದೆ. ಈ ಕಾರಣಕ್ಕೆ ಸಿನಿಮಾವನ್ನು ಕೆಲವೇ ದಿನಗಳಲ್ಲಿ ಚಿತ್ರಮಂದಿರದಿಂದ ಎತ್ತಂಗಡಿ ಮಾಡಿದ್ದರು. ಇದರಿಂದ ಕೋಟಿಗಟ್ಟಲೆ ನಷ್ಟ ಅನುಭವಿಸಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
‘ರಾಮ್ ನಗರ ಬನ್ನಿ’ ಸಿನಿಮಾ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದರು. ಹೊಸಬರ ಸಿನಿಮಾ ಇನ್ನೇನು ಬಾಕ್ಸಾಫೀಸ್ನಲ್ಲಿ ಪಿಕಪ್ ಆಗಬೇಕು ಅನ್ನುವ ಹೊತ್ತಲ್ಲೇ ಸೂಪರ್ಸ್ಟಾರ್ ಸಿನಿಮಾ ‘ದೇವರ’ ರಿಲೀಸ್ ಆಗಿತ್ತು. ಹೀಗಾಗಿ ಜನರು ಎಲ್ಲಾ ಆ ಸಿನಿಮಾ ಕಡೆಗೆ ವಾಲಿದ್ದರು. ಇದರಿಂದ ‘ರಾಮ್ ನಗರ ಬನ್ನಿ’ ಬಾಕ್ಸಾಫೀಸ್ನಲ್ಲಿ ನೆಲಕ್ಕಚ್ಚಿತ್ತು. ಇದರಿಂದ ರಾಮ್ ನಗರ ಬನ್ನಿ ಚಿತ್ರದ ನಿರ್ಮಾಪಕರು ಕೋಟಿಕೋಟಿ ಕಳೆದುಕೊಳ್ಳುವಂತಾಯಿತು.