ಜೂ. 9 ರಂದು ಭಾರತ-ಪಾಕಿಸ್ತಾನ್ ಹೈವೋಲ್ಟೋಜ್ ಮ್ಯಾಚ್ ನಡೆಯಲಿದ್ದು, ಫ್ಯಾನ್ಸ್ ಕಾತುರರಾಗಿದ್ದಾರೆ.
Virat Kohli: ನೆಚ್ಚಿನ RCB ಫ್ಯಾನ್ಸ್ ಗೆ ಕಿಂಗ್ ಕೊಹ್ಲಿ ಗುಡ್ ನ್ಯೂಸ್.. ಅದೇನು ಗೊತ್ತಾ!?
ಟಿ20 ವಿಶ್ವಕಪ್ ಜೂನ್ 2 ರಿಂದ ಶುರುವಾಗಲಿದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಲಿರುವ 9ನೇ ಆವೃತ್ತಿಯ ಚುಟುಕು ಕ್ರಿಕೆಟ್ ಕದನದಲ್ಲಿ ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಜೂನ್ 9 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಭಾರತ ತಂಡಗಳು ಮುಖಾಮುಖಿಯಾಗಲಿದೆ
ಈ ಪಂದ್ಯಕ್ಕಾಗಿ ಪಿಚ್ ನಿರ್ಮಿಸಿರುವುದು ಆಸ್ಟ್ರೇಲಿಯಾದ ಕ್ಯುರೇಟರ್ಗಳು ಎಂಬುದು ವಿಶೇಷ. ಅಂದರೆ ಅಡಿಲೇಡ್ನ ಓವಲ್ ಮೈದಾನದ ಕ್ಯುರೇಟರ್ಗಳು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗಾಗಿ ಪಿಚ್ಗಳನ್ನು ಸಿದ್ಧಪಡಿಸಿದ್ದಾರೆ. ಆಸ್ಟ್ರೇಲಿಯಾದ ಅಡಿಲೇಡ್ನಲ್ಲಿ ಸಿದ್ಧಪಡಿಸಲಾದ ಈ ಪಿಚ್ಗಳನ್ನು ಹಡಗುಗಳ ಮೂಲಕ ಅಮೆರಿಕಗೆ ಸಾಗಿಸಲಾಗಿದೆ. ಅದರಂತೆ ಇದೀಗ ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡೊ-ಪಾಕ್ ಕದನಕ್ಕೆ ಪಿಚ್ ರೆಡಿಯಾಗಿದೆ. ಈ ಪಿಚ್ ಅಡಿಲೇಡ್ ಓವಲ್ ಮೈದಾನದ ಪಿಚ್ ಮಾದರಿಯಲ್ಲಿರುವುದು ವಿಶೇಷ.
ಆಸ್ಟ್ರೇಲಿಯಾ ಪಿಚ್ಗಳು ವೇಗಿಗಳಿಗೆ ಸಹಕಾರಿ. ನಿರೀಕ್ಷೆಯಂತೆ ಟಿ20 ವಿಶ್ವಕಪ್ಗಾಗಿ ಅಡಿಲೇಡ್ ಓವಲ್ ಮೈದಾನದ ಕ್ಯುರೇಟರ್ಗಳು ನಿರ್ಮಿಸಿರುವುದು ಇದೇ ಮಾದರಿಯ ಪಿಚ್ ಎಂಬುದು ವಿಶೇಷ. ಈ ಬಗ್ಗೆ ಮಾತನಾಡಿದ ಓವಲ್ ಪಿಚ್ ಕ್ಯುರೇಟರ್ ಡಾಮಿಯನ್ ಹೌ, ನಮ್ಮ ಗುರಿ ವೇಗ ಮತ್ತು ಸ್ಥಿರವಾದ ಬೌನ್ಸ್ ಹೊಂದಿರುವ ಪಿಚ್ಗಳನ್ನು ನಿರ್ಮಿಸುವುದಾಗಿತ್ತು. ಅದರಂತೆ ಇದೀಗ ಅಂತಹ ಪಿಚ್ಗಳನ್ನು ನಿರ್ಮಿಸಿದ್ದೇವೆ. ಇದರಿಂದ ಬ್ಯಾಟರ್ ಮತ್ತು ಬೌಲರ್ಗಳ ನಡುವೆ ಉತ್ತಮ ಪೈಪೋಟಿ ಕಂಡು ಬರಲಿದೆ ಎಂದರು.