ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ಪತ್ರಕರ್ತನ ಭೀಕರ ಹತ್ಯೆ ನಡೆದಿದೆ. ಉತ್ತರಪ್ರದೇಶದ ಹಿಂದ ದಿನಪತ್ರಿಕೆಯ ಸ್ಥಳೀಯ ವರದಿಗಾರ ಮತ್ತು ಆರ್ಟಿಐ ಕಾರ್ಯಕರ್ತರು ಆಗಿದ್ದ ರಾಘವೇಂದ್ರ ಬಾಜ್ಪೈರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಲಕ್ನೋ-ದೆಹಲಿ ಹೆದ್ದಾರಿಯಲ್ಲಿ ರಾಘವೇಂದ್ರ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಮೊದಲು ಅವರ ಬೈಕ್ಗೆ ಡಿಕ್ಕಿ ಹೊಡೆದು ನಂತರ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಮೊದಲು ಇದನ್ನು ಅಪಘಾತವೆಂದೇ ತಿಳಿಯಲಾಗಿತ್ತು. ಆದರೆ ಆಸ್ಪತ್ರೆಯ ವೈದ್ಯರು ದೇಹದ ಮೂರು ಗುಂಡುಗಳು ಪತ್ತೆಯಾಗಿವೆ.
ಇನ್ನೂ ಪೊಲೀಸರ ಪ್ರಕಾರ, ಆರೋಪಿಗಳನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಮಹೋಲಿ, ಇಮಾಲಿಯಾ ಮತ್ತು ಕೊತ್ವಾಲಿಯ ಪೊಲೀಸ್ ತಂಡಗಳು, ಕಣ್ಗಾವಲು ಮತ್ತು ಎಸ್ಒಜಿ ತಂಡಗಳೊಂದಿಗೆ ಆರೋಪಿಗಳನ್ನು ತನಿಖೆ ಮಾಡಲು ಮತ್ತು ಗುರುತಿಸಲು ನಿಯೋಜಿಸಲಾಗಿದೆ.