ಹುಬ್ಬಳ್ಳಿ:- ಧಾರವಾಡ ಲೋಕಸಭೆ ಟಿಕೆಟ್ ವಿಚಾರದಲ್ಲಿ ಯಾವ ಉಹಾಪೋಹ ಇಲ್ಲ. ನಮ್ಮ ನಾಯಕರು ಜೋಶಿ ಅವರೇ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜೋಶಿ ಅವರೇ ನಮ್ಮ ಲೋಕಸಭೆ ಅಭ್ಯರ್ಥಿ. ಟಿಕೆಟ್ ಅವರಿಗೆ ಸಿಗಲಿದೆ ದೊಡ್ಡ ಅಂತರದಿಂದ ಅವರು ಗೆಲ್ಲಲ್ಲಿದ್ದಾರೆ ಎಂದು ಜೋಶಿಪರ ಬ್ಯಾಟ್ ಮಾಡಿದರು.
ಶೆಟ್ರ ನಿಮ್ಮ ನಾಯಕರ ಅಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನ ಹಾಗೆ ಹೇಳಿಲ್ಲ. ಆದ್ರೆ ನಾನ ಹೇಳೋದ ಪ್ರಲ್ಹಾದ್ ಜೋಶಿ ಬಿಟ್ಟರೆ ಯಾರೂ ಇಲ್ಲ. ನನಗೆ ಶೆಟ್ಟರ್ ಸೇರ್ಪಡೆ ಅಸಮಾಧಾನ ಇಲ್ಲ.
ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ. ಶೆಟ್ಟರ್ ಘರವಾಪ್ಸಿ ನಂತರ ಯಾವ ಬಣಗಳು ಆಗೋದಿಲ್ಲ. ಶೆಟ್ಟರ್ ವಾಪಸ್ ಬರೋ ಬಗ್ಗೆ ನಾವ ಯೋಚನೆ ಮಾಡಿರಲಿಲ್ಲ. ಬರ್ತೀದಾರೆ ಅಂತಾ ನಾಯಕರು ಹೇಳಿದ್ರು,ಸ್ವಾಗತ ಮಾಡಿದ್ದೇವೆ ಎಂದರು .