ಧಾರವಾಡ:- ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾತ್ರವಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದರು.
ಇದೀಗ ಈ ಆರೋಪಕ್ಕೆ ಸ್ವತಃ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಜೋಶಿರವರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಜೋಶಿರವರ ಪಾತ್ರ ಇಲ್ಲ. ಪ್ರಲ್ಹಾದ್ ಜೋಶಿ ಅವರು ಧೀಮಂತ ನಾಯಕ, ಈ ಬಾರಿ ಹೆಚ್ಚು ಅಂತರದಿಂದ ಗೆಲ್ಲುತ್ತಾರೆ. ಯಾವುದೇ ಕಾರಣಕ್ಕೂ ಪ್ರಲ್ಹಾದ್ ಜೋಶಿ ಟಿಕೆಟ್ ಬದಲಾವಣೆ ಆಗಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ, ಎಲ್ಲವೂ ಸರಿ ಹೋಗಿದೆ. ದಾವಣಗೆರೆಯಲ್ಲಿ ಅಸಮಾಧಾನವಿತ್ತು, ಅಲ್ಲಿಗೆ ಹೋಗಿ ಸರಿಪಡಿಸಿದ್ದೇನೆ. ಬೆಳಗಾವಿಯಲ್ಲಿ ಶೆಟ್ಟರ್ ವಿರುದ್ಧ ಅಸಮಾಧಾನವಿತ್ತು, ಅಲ್ಲೂ ಸರಿಪಡಿಸಿದ್ದೇನೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಪ್ಪು ಗ್ರಹಿಕೆಯಿಂದ ಮಾತನಾಡಿದ್ದಾರೆ. ಅವರ ಜೊತೆ ಚರ್ಚಿಸುತ್ತಿದ್ದೀನಿ, ಎಲ್ಲವೂ ಸರಿ ಹೋಗುತ್ತೆ ಎಂದಿದ್ದಾರೆ.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ದೊಡ್ಡ ಶಕ್ತಿಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ದೊಡ್ಡ ಶಕ್ತಿ, ನಮ್ಮ ಜೊತೆ ಪ್ರಚಾರಕ್ಕೆ ಬರ್ತಾರೆ. ಅವರು ಬರುವುದರಿಂದ ನಮಗೆ ಬಹಳ ಅನುಕೂಲ ಆಗುತ್ತೆ. ಕಾಂಗ್ರೆಸ್ ಗೊಂದಲದ ಬಗ್ಗೆ ನಾನೇಕೆ ಮಾತಾಡಲಿ, ಅದು ಅವರ ಆಂತರಿಕ ವಿಚಾರ. ಬಿಜೆಪಿಗೆ ತೇಜಸ್ವಿನಿ ಗೌಡ ರಾಜೀನಾಮೆ ನೀಡಿರುವ ವಿಚಾರವಾಗಿ ಮಾತನಾಡಿ ಇಷ್ಟು ದಿನ ಸ್ಥಾನಮಾನ ಕೊಟ್ಟಿದ್ದೆವು, ಅವರಿಗೆ ಒಳ್ಳೆಯದಾಗಲಿ ಎಂದರು.
ಬಿಜೆಪಿಯಿಂದ ಕಾಂಗ್ರೆಸ್ಗೆ ಬರುವವರ ದೊಡ್ಡ ಪಟ್ಟಿ ಇದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಯಾರೂ ಕಾಂಗ್ರೆಸ್ಗೆ ಹೋಗಲ್ಲ, ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಕಾಂಗ್ರೆಸ್ಗೆ ಹೋಗಿ ಯಾರು ಮುಳುಗುತ್ತಾರೆ, ಸುಮ್ಮನೇ ಹಸಿಸುಳ್ಳು ಹೇಳುತ್ತಾರೆ.
ಹಾಗೇನಾದರೂ ಬರ್ತೀನಿ ಅಂದಿದ್ರೆ, ಅದು ಒಳ್ಳೇದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಚಿತ್ರದುರ್ಗ ಬಿಟ್ಟು ಎಲ್ಲ ಕಡೆ ಟಿಕೆಟ್ ಹಂಚಿಕೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ವಾತಾವರಣ ಇದೆ. ಬಿಜೆಪಿ ಮತ್ತು ಜೆಡಿಎಸ್ ಸೇರಿ 28 ಕ್ಕೆ 28 ಗೆಲುತ್ತೇವೆ. ಮೈಸೂರ ಜಿಲ್ಲೆಯಲ್ಲಿ 105 ಕೋಟಿ ಹಣ ನೀಡಿಲ್ಲ. ಅಕ್ಕಿಗೆ ನೀಡಬೇಕಾದ ಹಣ ನೀಡಿಲ್ಲ. ಗ್ಯಾರಂಟಿ ಕೂಡಾ ಸರಿಯಾಗಿ ಜಾರಿಯಾಗಿಲ್ಲ. ಇದು ರೈತ ವಿರೋಧಿ ಸರ್ಕಾರ ಎಂದಿದ್ದಾರೆ.
ರಾಜ್ಯದಲ್ಲಿ ಎಸ್ ಸಿ ಎಸ್ ಟಿ ಮೀಸಲಿಟ್ಟ ಹಣ, ಬೇರೆ ಬೇರೆ ಯೋಜನೆಗೆ ಬಳಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಅವರನ್ನು ಸರ್ಕಾರ ರಕ್ಷಣೆ ಮಾಡಿದೆ. ಖಜಾನೆ ಖಾಲಿಯಾಗಿದೆ. ಶಾಸಕರಿಗೆ ಅನುದಾನ ಇಲ್ಲ, ರಸ್ತೆ ಮಾಡಿಲ್ಲ. ಮೋದಿ ವಿಶ್ವವೇ ಮೆಚ್ಚುವ ಕೆಲಸ ಮಾಡಿದ್ದಾರೆ ಎಂದರು.