ಪ್ರತಿ ಬಾರಿಯೂ ಆಸ್ಕರ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತದೆ. ಈ ಬಾರಿಯೂ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಸಾಕಷ್ಟು ಸುದ್ದಿ ಆಗಿದೆ. ಇದಕ್ಕೆ ಕಾರಣ ಆಗಿದ್ದು ಜಾನ್ ಸೀನಾ.
96ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಭಾರತೀಯ ಕಾಲಮಾನ ಮಾರ್ಚ್ 11ರ ಮುಂಜಾನೆ ಆರಂಭ ಆಗಿದೆ. ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಜಿಮ್ಮಿ ಕಿಮ್ಮೆಲ್ ಅವರು ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ.
ವ್ರೆಸ್ಲರ್ ಹಾಗೂ ಹಾಲಿವುಡ್ ನಟ ಜಾನ್ ಸೀನಾ ಅವರು ಆಗಾಗ ಚರ್ಚೆಯಲ್ಲಿ ಇರುತ್ತಾರೆ. ಅವರು ಫೈಟಿಂಗ್ ಜೊತೆ ನಟನೆಯಲ್ಲೂ ಮಿಂಚಿದ್ದಾರೆ. ಈಗ ಅವರು ಆಸ್ಕರ್ ವೇದಿಕೆ ಏರಿ ಸುದ್ದಿ ಆಗಿದ್ದಾರೆ. ಸಾಮಾನ್ಯವಾಗಿ ಈ ರೀತಿ ಕಾರ್ಯಕ್ರಮಕ್ಕೆ ಬರೋವಾಗ ಅತ್ಯುತ್ತಮ ಬಟ್ಟೆ ಧರಿಸಿ ಆಗಮಿಸುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಜಾನ್ ಸೀನಾ ಮಾತ್ರ ಬೆತ್ತಲಾಗಿ ಬಂದಿದ್ದಾರೆ. ಅದಕ್ಕೂ ಒಂದು ಕಾರಣ ಇದೆ
ಜಾನ್ ಸೀನಾ ಅವರು ಸಂಪೂರ್ಣ ಬೆತ್ತಲಾಗಿದ್ದರು. ಗುಪ್ತಾಂಗಕ್ಕೆ ಮಾತ್ರ ಒಂದು ಪ್ಲೇಟ್ ರೀತಿಯ ವಸ್ತುವನ್ನು ಹಿಡಿದುಕೊಂಡಿದ್ದರು. ಅವರು ಈ ರೀತಿ ವೇದಿಕೆ ಏರಿದ್ದು ‘ಅತ್ಯುತ್ತಮ ಕಾಸ್ಟ್ಯೂಮ್ ಅವಾರ್ಡ್’ ಪ್ರೆಸೆಂಟ್ ಮಾಡಲು. ಆ್ಯಂಕರ್ ಜಿಮ್ಮಿ ಕಿಮ್ಮೆಲ್ ಅವರು ಈ ರೀತಿ ಮಾಡುವಂತೆ ಜಾನ್ ಸೀನಾಗೆ ಸ್ಫೂರ್ತಿ ನೀಡಿದ್ದರು ಎನ್ನಲಾಗಿದೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.