ಸ್ಯಾಂಡಲ್ ವುಡ್ ನಿರ್ದೇಶಕ ಜೋಗಿ ಪ್ರೇಮ್ ಬಾಲಿವುಡ್ ನಲ್ಲಿ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಕಳೆದ ಕೆಲದಿಗನಳಿಂದ ಕೇಳುತ್ತಲೆ ಇದೆ. ಈ ಬಗ್ಗೆ ಇದೀಗ ಸ್ವತಃ: ಪ್ರೇಮ್ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಪ್ರೇಮ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದು ಈ ಸಿನಿಮಾ ಮುಗಿದ ಬಳಿಕವೇ ಬಾಲಿವುಡ್ ಗೆ ಹೋಗೋದಾಗಿ ಹೇಳಿದ್ದಾರೆ.
ಪ್ರೇಮ್ ಗೆ ಹಲವು ಭಾರಿ ಬೇರೆ ಬೇರೆ ಭಾಷೆಗಳಿಂದ ಆಫರ್ ಗಳು ಬಂದಿವೆ. ಆ ವೇಳೆ ಎಲ್ಲಾ ರಿಜೆಕ್ಟ್ ಮಾಡಿದ್ದ ಪ್ರೇಮ್ ಇದೀಗ ಬಾಲಿವುಡ್ ಗೆ ಎಂಟ್ರಿಕೊಡೋ ಮುನಸ್ಸು ಮಾಡಿದ್ದಾರೆ. ಸದ್ಯ ಸ್ಕ್ರೀಪ್ಟ್ ವರ್ಕ್ ಕೂಡ ನಡೆಯುತ್ತಿದ್ದು ಸದ್ಯದಲ್ಲೇ ಬಿಟೌನ್ ಚಿತ್ರರಂಗಕ್ಕೆ ಎಂಟ್ರಿಕೊಡಲಿದ್ದಾರೆ.
ಬಾಲಿವುಡ್ನ ಖ್ಯಾತ ನಿರ್ದೇಶಕ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಅವರು ಪ್ರೇಮ್ ಬಳಿ ಸಿನಿಮಾ ಮಾಡುವಂತೆ ಕೇಳಿ ಕೊಂಡಿದ್ದಾರಂತೆ.ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರೇಮ್, “ನಮ್ಮ ಸುಪ್ರಿತ್ ಅವರೆಲ್ಲ ಬಾಂಬೆಯಲ್ಲಿ ಕೆಡಿ ಫುಟೇಜ್ ಎಲ್ಲಾ ತೋರಿಸಿದ್ದಾರೆ. ಕೆಡಿ ಬ್ಯುಸಿನೆಸ್ ನಡೆಯುತ್ತಿರುತ್ತೆ. ಅಲ್ಲಿ ನೋಡಿಬಿಟ್ಟಿದ್ದಾರೆ. ಅಲ್ಯಾರೋ ಹೋಗಿ ಸಂಜಯ್ ಸರ್ಗೆ ಹೇಳಿದ್ದಾರೆ. ಅದನ್ನು ನೋಡಿ ನನಗೆ ಕೇಳಿದರು. ನನಗೆ ಒಂದು ಸಿನಿಮಾ ಡೈರೆಕ್ಟ್ ಮಾಡುತ್ತೀರಾ ಅಂತ. ನೋಡೋಣ ನಾನು ಟ್ರೈ ಮಾಡುತ್ತೇನೆ. ಇಂಡಿಯನ್ ಸಿನಿಮಾದ ಲೆಜೆಂಡ್ಗಳಲ್ಲಿ ಒಬ್ಬರು. ಅವರ ಮುಂದೆ ನಾವು ಚಿಕ್ಕವರು. ನೋಡೋಣ ಏನು ಮಾಡುವುದಕ್ಕೆ ಸಾಧ್ಯ ಅಂತ.” ಎಂದು ನಿರ್ದೇಶಕ ಜೋಗಿ ಪ್ರೇಮ್ ಹೇಳಿದ್ದಾರೆ. ಆದರೆ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಯಾರು ಅನ್ನೋ ಸುದ್ದಿಯನ್ನು ಮಾತ್ರ ಪ್ರೇಮ್ ಬಿಟ್ಟುಕೊಟ್ಟಿಲ್ಲ.