ಬೆಂಗಳೂರು: ಅರ್ಹ ಮತು ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಅಥವಾ ಪೋಸ್ಟ್ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ,
ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ವಿದ್ಯಾರ್ಹತೆ :
- ಮೆಡಿಕಲ್ ಆಫೀಸರ್ : ಎಂಬಿಬಿಎಸ್.
- ಮಿಡ್ವೈಫ್/ನರ್ಸ್ : ಡಿಪ್ಲೊಮಾ, ಬಿ.ಎಸ್ಸಿ.
- ಲ್ಯಾಬೊರೇಟರಿ ಟೆಕ್ನಿಷಿಯನ್ : ಡಿಎಂಎಲ್ಟಿ, ಬಿ.ಎಸ್ಸಿ.
ವಯೋಮಿತಿ:
- ಮೆಡಿಕಲ್ ಆಫೀಸರ್ : 65 ವರ್ಷ
- ಮಿಡ್ವೈಫ್/ನರ್ಸ್ : 45 ವರ್ಷ
- ಲ್ಯಾಬೊರೇಟರಿ ಟೆಕ್ನಿಷಿಯನ್ : 40 ವರ್ಷ
ಹುದ್ದೆಗಳ ವಿವಿರ :
- ವೈದ್ಯಾಧಿಕಾರಿಗಳು: 65
- ಶುಶ್ರೂಷಕಿ / ಶುಶ್ರೂಷಕರು: 45
- ಪ್ರಯೋಗಶಾಲಾ ತಂತ್ರಜ್ಞರು: 40
ವೇತನ:
- ಮೆಡಿಕಲ್ ಆಫೀಸರ್ : ಮಾಸಿಕ ₹ 47,250
- ಮಿಡ್ವೈಫ್/ನರ್ಸ್ : ಮಾಸಿಕ ₹ 18,714
- ಲ್ಯಾಬೊರೇಟರಿ ಟೆಕ್ನಿಷಿಯನ್ : ಮಾಸಿಕ ₹ 18,465
ಉದ್ಯೋಗದ ಸ್ಥಳ :
* ಬೆಂಗಳೂರು
ಆಯ್ಕೆ ಪ್ರಕ್ರಿಯೆ :
* ಲಿಖಿತ ಪರೀಕ್ಷೆ
* ಸಂದರ್ಶನ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಮುಖ್ಯ ವೈದ್ಯಾಧಿಕಾರಿ ಕಚೇರಿ (ಸಾರ್ವಜನಿಕ ಆರೋಗ್ಯ)
#304, ಅನೆಕ್ಸ್-3 ಕಟ್ಟಡ
3ನೇ ಮಹಡಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ
ಎನ್.ಆರ್.ಚೌಕ್
ಬೆಂಗಳೂರು-560002.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಜೂನ್ 13, 2024.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 30, 2024.