ಹುಬ್ಬಳ್ಳಿ: ಕೈ-ಕಾಲು ಕಳೆದುಕೊಂಡವರಿಗೆ ಕೃತಕ ಕೈ-ಕಾಲು ಕೊಡಲು ಮಜೇಥಿಯಾ ಫೌಂಡೇಷನ್ ಆಶ್ರಯದಲ್ಲಿ ನಗರದ ಮೂರುಸಾವಿರ ಮಠದ ಸಭಾ ಭವನದಲ್ಲಿ ಅಳತೆ ಪಡೆಯಲಾಯಿತು. ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಗವಿಕಲರ ಸೇವೆಯಲ್ಲಿ ಫೌಂಡೇಷನ್ ನಿರತವಾಗಿರುವುದು ಸಂತೋಷ ವಿಷಯ. ಬಡವರ ಬಗ್ಗೆ ಅತೀವ ಕಾಳಜಿ ಹೊಂದಿರುವ ಜಿತೇಂದ್ರ ಮಜೇಥಿಯಾ ಅವರು ಕಲಿಯುಗದ ಕರ್ಣ ಎಂದರು.
ಕೈ-ಕಾಲು ಕಳೆದುಕೊಂಡವರು ನಿತ್ಯ ಜೀವನ ನಡೆಸುವುದು ಕಷ್ಟ. ಇಂಥವರ ಬಾಳಿಗೆ ಊರುಗೋಲಿನ ಅಗತ್ಯವಿದೆ. ಬೇರೆಯವರ ಮೇಲೆ ಅವಲಂಬನೆಯಾಗದೇ ಸ್ವಾವಲಂಬಿಯಾಗಲಿ ಎಂದು ಮಜೇಥಿಯಾದವರು ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ್ ಮಜೇಥಿಯಾ ಅಧ್ಯಕ್ಷತೆ ವಹಸಿ ಮಾತನಾಡಿ, ಅಂಗವಿಕಲ ಸೇವೆಗೆ ನಮ್ಮ ಫೌಂಡೇಷನ್ ಸದಾ ಸಿದ್ಧ ಎಂದು ವಾಗ್ದಾನ ಮಾಡಿದರು. ಹೈದರಾಬಾದ್ನಿಂದ ಆಗಮಿಸಿದ್ದ ಕೃತಕ ಕೈ-ಕಾಲು ತಯಾರಿಕ ಘಟಕವು ಅಂಗವಿಕಲರ ಕೈ-ಕಾಲುಗಳ ಅಳತೆ ತೆಗೆದುಕೊಂಡಿತು.
ಫೌಂಡೇಷನ್ ಕಾರ್ಯದರ್ಶ ಅಮರೇಶ ಹಿಪ್ಪರಗಿ, ಡಾ.ಕೆ. ರಮೇಶ ಬಾಬು, ಡಾ.ವಿ.ಬಿ. ನಿಟಾಲಿ, ಡಾ. ನಾಗರಾಜ ಸಾನು, ಪ್ರಹ್ಲಾದರಾವ್, ಅಮೃತಬಾಯಿ ಪಟೇಲ್, ಸಂಯೋಜಕ ಮಂಜುನಾಥ ಭಟ್, ಸುನೀಲ ಕುಕನೂರ ಹಾಗೂ ಸಮಾಜ ಸೇವಕರು ಇದ್ದರು.