ರಿಲಯನ್ಸ್ ಡಿಜಿಟಲ್ ನಿಂದ ಬಹು ನಿರೀಕ್ಷಿತ ದೀಪಾವಳಿ ಡಬಲ್ ಧಮಾಕಾ ಆಫರ್ ಘೋಷಣೆ ಮಾಡಿದೆ. ಇದರೊಂದಿಗೆ ಗ್ರಾಹಕರಿಗೆ ಒಂದು ವರ್ಷ ಉಚಿತವಾಗಿ ಜಿಯೋಏರ್ ಫೈಬರ್ ಸೇವೆ ದೊರೆಯಲಿದೆ. ದೇಶದಾದ್ಯಂತ ಇರುವ ಎಲ್ಲ ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲೂ ಈ ಹಬ್ಬದ ಆಫರ್ ದೊರೆಯಲಿದೆ. ಅಂದಹಾಗೆ ಸೆಪ್ಟೆಂಬರ್ 18ರಿಂದ ನವೆಂಬರ್ 3ನೇ ತಾರೀಕಿನವರೆಗೆ ಈ ಕೊಡುಗೆ ಜಾರಿಯಲ್ಲಿರುತ್ತದೆ.
ಉಚಿತ ಜಿಯೋಫೈಬರ್ ಸೇವೆ ಪಡೆಯಲ ಗ್ರಾಹಕರು ಹೆಚ್ಚಿನ ಸರ್ಕಸ್ ಮಾಡಬೇಕಿಲ್ಲ. ಯಾವೆಲ್ಲ ಗ್ರಾಹಕರು ಇಪ್ಪತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರಿಲಯನ್ಸ್ ಡಿಜಿಟಲ್ ಅಥವಾ ಮೈಜಿಯೋದಲ್ಲಿ ವೆಚ್ಚ ಮಾಡುತ್ತಾರೋ ಅವರು ಈ ಆಫರ್ ಪಡೆಯಲು ಅರ್ಹರಾಗಿದ್ದಾರೆ. ಒಂದು ವರ್ಷದ ಉಚಿತ ಆಫರ್ನಿಂದ ಮನೆಯಲ್ಲಿ ಅಂತ್ಯಂತ ವೇಗದ ಇಂಟರ್ನೆಟ್ ಸಂಪರ್ಕ ಸಿಗಲಿದೆ.
ಅಡೆ ತಡೆ ಇಲ್ಲದ ಸ್ಪೀಡ್ ನೆಟ್ವರ್ಕ್ ಈ ಕೊಡುಗೆಯಲ್ಲಿ ಪಡೆಯಬಹುದು. ಈ ಕೊಡುಗೆಯು ಜಿಯೋಫೈಬರ್ ಹಾಗೂ ಜಿಯೋಏರ್ ಫೈಬರ್ ನ ಹೊಸ ಗ್ರಾಹಕರು ಮತ್ತು ಈಗಾಗಲೇ ಗ್ರಾಹಕರಾದವರಿಗೆ ದೊರೆಯುತ್ತದೆ. ಈ ಕೊಡುಗೆಯು ಜಿಯೋದ ವಿಶ್ವಾಸಾರ್ಹ ಗ್ರಾಹಕರಿಗೆಲ್ಲ ದೊರೆಯಬೇಕು ಎಂಬುದು ಕಂಪನಿ ಉದ್ದೇಶವಾಗಿದೆ.
ಉಚಿತ ಜಿಯೋಏರ್ಫೈಬರ್ ಕೊಡುಗೆ ಪಡೆಯಲು ಬೇಕಾದ ಮಾನದಂಡಗಳೇನು?
ಹೊಸ ಗ್ರಾಹಕರಾಗಿದ್ದಲ್ಲಿ ಇಪ್ಪತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರಿಲಯನ್ಸ್ ಡಿಜಿಟಲ್ ಅಥವಾ ಮೈಜಿಯೋದಲ್ಲಿ ವೆಚ್ಚ ಮಾಡಬೇಕು. ಅಥವಾ ಜಿಯೋಏರ್ ಫೈಬರ್ ಸಂಪರ್ಕವನ್ನು ಪಡೆದುಕೊಳ್ಳುವಾಗ 2,222 ರೂಪಾಯಿಗೆ ಮೂರು ತಿಂಗಳ ದೀಪಾವಳಿ ಪ್ಲಾನ್ ಗೆ ಚಂದಾದಾರರಾಗಬೇಕು. ಇನ್ನು ಈಗಾಗಲೇ ಗ್ರಾಹಕರಾಗಿರುವವರು 2,222 ರೂಪಾಯಿಗೆ ಮುಂಗಡವಾಗಿ ಮೂರು ತಿಂಗಳ ದೀಪಾವಳಿ ಪ್ಲಾನ್ ಗೆ ರೀಚಾರ್ಜ್ ಮಾಡಿಸಬೇಕಾಗುತ್ತದೆ.
ಅರ್ಹ ಗ್ರಾಹಕರು ಹನ್ನೆರಡು ಕೂಪನ್ ಗಳನ್ನು ಪಡೆಯುತ್ತಾರೆ. ಅವರು 2024ರ ನವೆಂಬರ್ ನಿಂದ 2025ರ ಅಕ್ಟೋಬರ್ ತನಕ ಪ್ರತಿ ತಿಂಗಳು ರಿಡೀಮ್ ಮಾಡಿಕೊಳ್ಳಬಹುದು. ಆ ಕೂಪನ್ ಮೌಲ್ಯವು ಆಯಾ ಗ್ರಾಹಕರು ಸಕ್ರಿಯ ಜೊಯೋಏರ್ ಫೈಬರ್ ಪ್ಲಾನ್ ಗೆ ಸಮನಾಗಿರುತ್ತದೆ. ಅದನ್ನು 30 ದಿನದೊಳಗೆ ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ ಜಿಯೋಪಾಯಿಂಟ್, ಜಿಯೋಮಾರ್ಟ್ ಎಕ್ಸ್ ಕ್ಲೂಸಿವ್ ಮಳಿಗೆಯಲ್ಲಿ ತಮ್ಮ ಮುಂದಿನ ಎಲೆಕ್ಟ್ರಾನಿಕ್ಸ್ ಖರೀದಿ ಹದಿನೈದು ಸಾವಿರ ರೂಪಾಯಿ ಮೇಲ್ಪಟ್ಟು ಮಾಡಿದಾಗ ರಿಡೀಮ್ ಮಾಡಬಹುದು ಈ ಆಫರ್ ಇರುವುದು ನವೆಂಬರ್ ಮೂರನೇ ದಿನಾಂಕದವರೆಗೆ ಮಾತ್ರ.