ಕಲಬುರ್ಗಿ :- ಮಕ್ಕಳ ವಿಭಾಗದಲ್ಲಿನ ಗುಣಮಟ್ಟದ ಸೇವೆಗೆ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಕೇಂದ್ರ ಸರ್ಕಾರ ಶಹಬ್ಬಾಶ್ ಅಂತ ಸರ್ಟಿಫಿಕೇಟ್ ನೀಡಿದೆ.
ಮಕ್ಕಳ ವಿಭಾಗದ ಪೀಡಿಯಾಟ್ರಿಕ್ OPD ಪೀಡಿಯಾಟ್ರಿಕ್ ವಾರ್ಡ್, SNCU & NRC ಘಟಕಗಳಿಗೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶೇ.92 ಅಂಕದೊಂದಿಗೆ ಗುಣಮಟ್ಟದ ವಿಭಾಗ ಎಂದು ಪ್ರಮಾಣೀಕರಿಸಿದೆ.
ಮುಸ್ಕಾನ್ ಕಾರ್ಯಕ್ರಮದ ಅಡಿಯಲ್ಲಿ ಈ ಸರ್ಟಿಫಿಕೇಟ್ ನೀಡಿದೆ. ಇದಕ್ಕಾಗಿ ಶ್ರಮಿಸಿದ ಜಿಮ್ಸ್ ವೈದ್ಯ ಹಾಗೂ ವೈದ್ಯೇತರ ಎಲ್ಲಾ ಸಿಬ್ಬಂದಿ ಅಭಿನಂದನೆಗೆ ಅರ್ಹರು ಅಂತ DC ಫೌಜಿಯಾ ತರನ್ನುಮ್ ಹರ್ಷ ವ್ಯಕ್ತಪಡಿಸಿದ್ದಾರೆ…