ಬೆಂಗಳೂರು ಕಾಟೇರ’ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿದ್ದರು ಎಂಬ ಆರೋಪ ಕೇಳಿಬಂದಿದ್ದು ನಟ ದರ್ಶನ್ & ಟೀಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಪರ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಬ್ಯಾಟ್ ಬೀಸಿದ್ದಾರೆ.
ಸ್ಟಾರ್ಸ್ ಗಳು ಅವಧಿ ಮೀರಿ ಪಾರ್ಟಿ ಮಾಡಿದ ವಿಚಾರವಾಗಿ ನಟರನ್ನ ಸ್ಟೇಷನ್ ಗೆ ಕರೆಸಿದ ಪೊಲೀಸರೇ ತಪ್ಪಿತಸ್ಥರು ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿಕೆ ನೀಡಿದ್ದಾರೆ.ಇಡೀ ಏಷ್ಯಾದಲ್ಲಿ ಅತಿ ಹೆಚ್ಚು ಸೆಕ್ಯೂರಿಟಿ ಬೆಂಗಳೂರಲ್ಲಿ ಇದೆ 20 ಸಾವಿರ ಪೊಲೀಸ್ ಅಧಿಕಾರಿಗಳು ಇದ್ದಾರೆ. ರಾತ್ರಿಯೆಲ್ಲಾ ಪೊಲೀಸರು ರೋಡಲ್ಲಿ ಬೀಟ್ ಹಾಕ್ತಾರೆ , ಜೆಟ್ ಲಾಗ್ ಇರೋದು ಜನ ಸಂದಣಿ ಇರೋ ಪ್ರದೇಶದಲ್ಲಿದೆ. ಮುಂಬೈ ಹೋಗುವ ರೋಡಲ್ಲಿ ಇದೆ ಈ ಪಬ್, ಮೂರು ಗಂಟೆಗೆ ಪೊಲೀಸರು ಹೋಗಿದ್ದಾರೆ ಅಂತಾರೆ ಇಲ್ಲಿ ಒಂದು ಗಂಟೆ ವರೆಗೆ ಮಾತ್ರ ಪರ್ಮಿಶನ್ ಇದೆ ಬೆಳಿಗ್ಗಿನ ಜಾವ ೩-೩೦ವರೆಗೂ ಓಪನ್ ಮಾಡಲು ಅವರಿಗೆ ಅನುಮತಿ ಕೊಟ್ಟಿರಿವವರು ಯಾರು..? ಆದ್ರೂ ಈ ಪಬ್ ಅನ್ನು ಓಪನ್ ಇಡೋದಕ್ಕೆ ಬಿಟ್ಟಿದ್ಯಾರು..
ಈ ನೆಲದ ನಟರಿಗೆ ನೋಟಿಸ್ ಕೊಟ್ಟಿದ್ಯಾಕೆ*ಎಸಿಪಿ, ಡಿಸಿಪಿ,ಇನ್ಸ್ಪೆಕ್ಟರ್ ಇದಕ್ಕೆ ಉತ್ತರ ಕೊಡ್ಬೇಕು ಪೊಲೀಸರು ರೋಲ್ ಕಾಲ್ ಮಾಡಿ ಓಪನ್ ಮಾಡಲು ಬಿಟ್ಟಿದ್ದಾರಾ..? ನೀವು ಅಲ್ಲಿ ಹೋಗಿದ್ದರೆ ವಿಡಿಯೋ ರಿಲೀಸ್ ಮಾಡಿ ಅವ್ರ ತಪ್ಪನ್ನ ಮುಚ್ಚಿಸೋಕೆ ಇವ್ರ ಮೇಲೆ ಹಾಕಿದ್ದಾರೆ ನಿಮಗೂ ಆ ಪಬ್ ಅವ್ರಿಗೂ ಏನ್ ಅಡ್ಜೆಸ್ಮೆಂಟ್ ಇದೆ ನಾನು ಗೃಹ ಸಚಿವರಿಗೆ ಮನವಿ ಮಾಡ್ತೇನೆ ಗ್ರಾಹಕರಿಗೆ ನೋಟಿಸ್ ಕೊಡೋದು ಎಷ್ಟು ಸರಿ. ಚಲನ ಚಿತ್ರ ನಟರು ಈ ನೆಲದ ಆಸ್ತಿ. ಪಬ್ ಬಾರ್ ಜೊತೆ ಅಡ್ಜೆಸ್ಮೆಂಟ್ ಮಾಡ್ಕೊಂಡು ಗ್ರಾಹಕರಿಗೆ ನೋಟಿಸ್ ಕೊಟ್ಟಿದ್ದಾರೆ ಇಲ್ಲಿ ಪ್ರಮುಖವಾಗಿ ಪೊಲೀಸರದ್ದೆ ತಪ್ಪು ದರ್ಶನ್ ,ಡಾಲಿ ಎಲ್ಲರನ್ನೂ ಪೊಲೀಸ್ ಠಾಣೆಗೆ ಕರೆಸಿದ್ದು ತಪ್ಪು 24 ಗಂಟೆಯೊಳಗೆ ಸಂಬಂಧಪಟ್ಟ ಪೊಲೀಸರು ಸಸ್ಪೆಂಡ್ ಆಗಬೇಕು ಇಲ್ಲದ್ದಿದ್ರೆ ನಾನೇ ಗೃಹ ಸಚಿವರನ್ನ ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ಶಾಸಕ ರವಿ ಕುಮಾರ್ ಕಿಡಿ ಕಾರಿದ್ದಾರೆ.
ಶುಕ್ರವಾರ ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ಎಂಟ್ರಿಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿಕ್ಕಣ್ಣ , ಡಾಲಿ ಧನಂಜಯ್ಯ, ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪೊಲೀಸರ ವಿಚಾರಣೆ ಎದುರಿಸಿದ್ರು. ಈ ವೇಳೆ ದರ್ಶನ್ ಅಂಡ್ ಟೀಂಗೆ ಪೊಲೀಸರು ಕೆಲ ಪ್ರಶ್ನೆಗಳನ್ನ ಕೇಳಿ ಮಾಹಿತಿ ಪಡೆದುಕೊಂಡ್ರು.
ಸುಬ್ಮಮಣ್ಯ ನಗರ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ದರ್ಶನ್ ಹಾಗೂ 7 ಮಂದಿಯನ್ನ ಇನ್ಸ್ಪೆಕ್ಟರ್ ಸುರೇಶ್, ಬಾಲಕೃಷ್ಣ, ಜಗದೀಶ್ ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಮಾತನಾಡಿದ ರಾಕ್ಲೈನ್ ವೆಂಕಟೇಶ್ ಇದೇ ಮೊದಲು ಗ್ರಾಹಕರಿಗೆ ನೋಟಿಸ್ ಕೊಟ್ಟಿದ್ದಾರೆ. ಕೆಲವರು ದರ್ಶನ್ನ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಅಸಮಾಧಾನ ಹೊರಹಾಕಿದರು.