ಬೆಂಗಳೂರು:-ಲೋಕಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಹಾಸನದಲ್ಲಿ ಜೆಡಿಎಸ್ ಮುನ್ನಡೆಯಲ್ಲಿದ್ದರೆ, ಮತ್ತೊಂದೆಡೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಫಲಿತಾಂಶ ನೋಡಲಾಗದೆ, ಕೇಳಲಾಗದೆ ಪರಿತಪಿಸುತ್ತಿದ್ದಾರೆ
Postal Vote Counting: ಅಂಚೆಮತಗಳಲ್ಲಿ NDA ಬಹುಮತ.. ಬೆಳ್ಳಂ ಬೆಳಗ್ಗೆ ಕಾಂಗ್ರೆಸ್ ಗೆ ಶಾಕ್..!
ಹಾಸನದ ಮತ ಎಣಿಕೆ ತೀವ್ರ ಕುತೂಹಲ ಮೂಡಿಸಿದ್ದು, ಪ್ರಜ್ವಲ್ ರೇವಣ್ಣ ಒಮ್ಮೆ ಹಿನ್ನಡೆ, ಮತ್ತೊಮ್ಮೆ ಮುನ್ನಡೆ ಸಾಧಿಸುತ್ತಿದ್ದಾರೆ. ಸದ್ಯ ಪ್ರಜ್ವಲ್ 3009 ಮತಗಳ ಮುನ್ನಡೆಯಲ್ಲಿದ್ದಾರೆ. ಫಲಿತಾಂಶ ವೀಕ್ಷಿಸಲು ಟಿವಿ ವ್ಯವಸ್ಥೆ ಮಾಡಿ ಎಂದು ಎಸ್ಐಟಿ ಮುಂದೆ ಪ್ರಜ್ಬಲ್ ಬೇಡಿಕೆ ಇಟ್ಟಿದ್ದಾರೆ. ಆದರೆ, ಟಿವಿ ವ್ಯವಸ್ಥೆಗೆ ಕೋರ್ಟ್ ಅನುಮತಿ ಬೇಕೆಂದು ಎಸ್ಐಟಿ ತನಿಖಾಧಿಕಾರಿ ಹೇಳಿದ್ದಾರೆ. ಹೀಗಾಗಿ ಎಸ್ಐಟಿ ಸೆಲ್ನಲ್ಲಿ ಪ್ರಜ್ವಲ್ ಡಲ್ಲಾಗಿ ಅತ್ತಿಂದಿತ್ತ ಓಡಾಡಿಕೊಂಡಿದ್ದಾರೆ
ಹೈ ವೋಲ್ಟೇಜ್ ಸ್ಪರ್ಧೆಯ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ (Bangalore Rural Lok Sabha Constituency) ಮತ ಎಣಿಕೆ (vote counting) ಕಾರ್ಯ ಸಾಂಗವಾಗಿ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ (Dr CN Manjunath) ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. 9 ಗಂಟೆಯ ಹೊತ್ತಿಗೆ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ನ ಡಿ.ಕೆ ಸುರೇಶ್ (DK Suresh) ಅವರಿಗಿಂತ 50,000 ಮತಗಳ ಮುನ್ನಡೆ (Election results 2024) ಕಾಯ್ದುಕೊಂಡಿದ್ದಾರೆ