ಐಸಿಸಿ ಟೆಸ್ಟ್ ಬೌಲರ್ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟೀಮ್ ಇಂಡಿಯಾದ ಜಸ್ಪ್ರೀತ್ ಬುಮ್ರಾ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೌದು ಐಸಿಸಿ 2025 ರ ಮೊದಲ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಈ ಹಿಂದೆ ಯಾವುದೇ ಭಾರತೀಯ ಬೌಲರ್ ಮಾಡದ ಸಾಧನೆ ಮಾಡಿದ್ದಾರೆ.
ಮೆಲ್ಬೋರ್ನ್ ಟೆಸ್ಟ್ನಲ್ಲಿ 9 ವಿಕೆಟ್ ಪಡೆದಿದ್ದ ಜಸ್ಪ್ರಿತ್ ಬುಮ್ರಾ ಇದೀಗ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ 907 ರೇಟಿಂಗ್ ಪಾಯಿಂಟ್ಗಳನ್ನು ಪಡೆದಿರುವ ಬುಮ್ರಾ ಇದರೊಂದಿಗೆ ಐಸಿಸಿ ಶ್ರೇಯಾಂಕದ ಇತಿಹಾಸದಲ್ಲಿ ಇಷ್ಟು ರೇಟಿಂಗ್ ಪಾಯಿಂಟ್ ಪಡೆದ ಭಾರತದ ಮೊದಲ ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತದ ಯಾವುದೇ ಬೌಲರ್ಗಳು ಟೆಸ್ಟ್ ಶ್ರೇಯಾಂಕದಲ್ಲಿ ಇಷ್ಟು ರೇಟಿಂಗ್ ಅಂಕಗಳನ್ನು ಗಳಿಸಲು ಸಾಧ್ಯವಾಗಿರಲಿಲ್ಲ.
SIM Card New Rules: ಹೊಸ ಸಿಮ್ ಖರೀದಿಸೋ ಪ್ಲಾನ್ʼನಲ್ಲಿದ್ದೀರಾ..? ಹಾಗಿದ್ರೆ ಈ ರೂಲ್ಸ್ ತಿಳಿಯಲೇಬೇಕು
ಜಸ್ಪ್ರೀತ್ ಬುಮ್ರಾ ಮೊದಲು, ಆರ್ ಅಶ್ವಿನ್ ಐಸಿಸಿ ಶ್ರೇಯಾಂಕದ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆದ ಭಾರತದ ಟೆಸ್ಟ್ ಬೌಲರ್ ಆಗಿದ್ದರು. ಕಳೆದ ಬಾರಿಯ ರ್ಯಾಂಕಿಂಗ್ ಪಟ್ಟಿಯಲ್ಲಿ ಅಶ್ವಿನ್ರನ್ನು ಸರಿಗಟ್ಟಿದ್ದ ಬುಮ್ರಾ ಇದೀಗ ನಂಬರ್ 1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಅಶ್ವಿನ್ ಡಿಸೆಂಬರ್ 2016 ರಲ್ಲಿ 904 ರೇಟಿಂಗ್ ಪಾಯಿಂಟ್ಗಳನ್ನು ಪಡೆದುಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತದ ಬೌಲರ್ ಎನಿಸಿಕೊಂಡಿದ್ದರು. ಇದೀಗ 907 ರೇಟಿಂಗ್ ಪಾಯಿಂಟ್ ಪಡೆದಿರುವ ಬುಮ್ರಾ, ಅಶ್ವಿನ್ʼರ ದಾಖಲೆಯನ್ನು ಪುಡಿಗಟ್ಟಿದ್ದಾರೆ.