ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ (Janhvi Kapoor) ಆಡಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕಾಫಿ ವಿತ್ ಕರಣ್ (Koffee With Karan) ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ಜಾಹ್ನವಿ, ನಿರೂಪಕ ಕರಣ್ ಜೋಹಾರ್ (Karan Johar) ಕೇಳಿದ ಪ್ರಶ್ನೆಗೆ ಅಷ್ಟೇ ಬೋಲ್ಡ್ ಆಗಿ ಉತ್ತರಿಸಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬೋಲ್ಡ್ ಪ್ರಶ್ನೆಗಳನ್ನು ಕೇಳುವುದರಲ್ಲಿ ಕರಣ್ ಜೋಹಾರ್ ಎತ್ತಿದ ಕೈ. ಅದರಲ್ಲೂ ಕಾಂಟ್ರವರ್ಸಿ ಎನ್ನುವಂತಹ ಪ್ರಶ್ನೆಗಳನ್ನೂ ಅವರು ಕೇಳುತ್ತಾರೆ. ಹೆಚ್ಚಾಗಿ ಅವರ ಮಾತುಗಳು ಸೆಕ್ಸ್, ಅಫೇರ್, ಬ್ರೇಕ್ ಅಪ್, ಡೇಟಿಂಗ್ ಇದರ ಸುತ್ತಲೇ ಗಿರಕಿ ಹೊಡೆಯುತ್ತವೆ. ಅದರಲ್ಲೂ ಸೆಕ್ಸ್ ಬಗ್ಗೆ ಕೇಳದೇ ಯಾವ ಎಪಿಸೋಡ್ ಅನ್ನು ಅವರು ಮುಗಿಸೋದಿಲ್ಲ. ಜಾಹ್ನವಿ ಎಪಿಸೋಡ್ ನಲ್ಲಿ ಅವರು ಬೇರೆ ರೀತಿಯಲ್ಲಿ ಕೇಳಿ ಅಚ್ಚರಿ ಮೂಡಿಸಿದ್ದಾರೆ.
ಜಾಹ್ನವಿ ಕಪೂರ್ ಅವರ ಸಿನಿಮಾ ಕೆರಿಯರ್, ಶೂಟಿಂಗ್, ಫ್ರೆಂಡ್ಸ್ ಹೀಗೆ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಾ ಹೋಗುವ ಕರಣ್ ಜೋಹಾರ್, ಕೊನೆಗೊಂದು ಪ್ರಶ್ನೆ ಮಾಡುತ್ತಾರೆ. ರಾಪಿಡ್ ರೌಂಡ್ ನಲ್ಲಿ ಅವರು, ನಿಮ್ಮನ್ನು ಮೊದಲ ಬಾರಿಗೆ ಹುಡುಗರು ನೋಡಿದಾಗ, ಅವರ ಕಣ್ಣುಗಳು ನಿಮ್ಮಲ್ಲಿ ಏನನ್ನು ನೋಡುತ್ತಿರುತ್ತವೆ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಅಷ್ಟೇ ಸಖತ್ತಾಗಿ ಆನ್ಸರ್ ಮಾಡಿದ್ದಾರೆ ಜಾಹ್ನವಿ.
ಮೊದಲ ಬಾರಿಗೆ ಹುಡುಗರು ನನ್ನನ್ನು ನೋಡಿದಾಗ, ಅವರು ನನ್ನ ಕಣ್ಣುಗಳನ್ನು ನೋಡುತ್ತಾರೆ ಎಂದುಕೊಂಡಿದ್ದೆ. ಆದರೆ, ಅವರು ಬೇರೆಯದನ್ನೇ ನೋಡ್ತಾ ಇರ್ತಾರೆ ಅನ್ನೋದು ಆಮೇಲೆ ಗೊತ್ತಾಯಿತು ಎಂದು ಹೇಳುವ ಮೂಲಕ ಹುಡುಗರಿಗೆ ಶಾಕ್ ನೀಡಿದ್ದಾರೆ