ಮಂಡ್ಯ:- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ನಿನ್ನೆ ಮಂಡ್ಯದಲ್ಲಿ ಜನತಾ ದರ್ಶನ ನಡೆಸಿದ್ದಾರೆ. ಸರ್ಕಾರದ ಸೂಚನೆ ಹಿನ್ನೆಲೆ ಕೇಂದ್ರ ಸಚಿವರ ಜನತಾ ದರ್ಶನಕ್ಕೆ ಅಧಿಕಾರಿಗಳು ಬಂದಿರಲಿಲ್ಲ. ಆದರೂ ಸಮಸ್ಯೆ ಆಲಿಸಿದ ಹೆಚ್ ಡಿ ಕುಮಾರಸ್ವಾಮಿ ಪರಿಹಾರ ಒದಗಿಸಲು ಮುಂದಾಗಿದ್ದಾರೆ.
ಇಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಇದೀಗ ಅಂತ್ಯವಾಗಿದೆ. ಬಳಿಕ ಮಾತನಾಡಿದ ಅವರು, ಜನತಾದರ್ಶನದಲ್ಲಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. 7 ಗಂಟೆಗಳ ಕಾಲ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಹೆಚ್ಚು ಜನರಿದ್ದ ಹಿನ್ನೆಲೆ ಹೊರಗೆ ಊಟಕ್ಕೆ ತೆರಳದೆ ಜನತಾ ದರ್ಶನ ಕಾರ್ಯಕ್ರಮದಲ್ಲೇ ಊಟ ಮಾಡಿ HDK ಗಮನ ಸೆಳದಿದ್ದರು.
ಬಳಿಕ ಮಾತನಾಡಿದ HDK, ಜನರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುವ ಬಗ್ಗೆ ವಿಶ್ವಾಸವಿಲ್ಲ. ಮಂಡ್ಯ ನಗರದಲ್ಲಿ ನಿವೇಶನ ನೀಡುವಂತೆ ಸಾಕಷ್ಟು ಒತ್ತಡವಿದೆ. ರಾಜಕಾರಣ ಬೇರೆ, ಕೆಲವು ಕಾರ್ಯಕ್ರಮ ತರಲು ಅವಕಾಶ ಇದೆ. ಸಿಎಂ ಸಿದ್ದರಾಮಯ್ಯ, ಸಚಿವರು ಕೂಡ ಜನತಾದರ್ಶನ ಮಾಡಿದ್ದರು. ಚುನಾವಣೆ ಮುಂಚೆ ಜನತಾದರ್ಶನದಲ್ಲಿ ಎಷ್ಟು ಪರಿಹಾರ ಸಿಕ್ಕಿದೆ ಅಂತಾ ಜನತಾದರ್ಶನ ವೇಳೆ ದರ್ಶನವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೆಲವು ವಿಚಾರ ಸುತ್ತಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರೇ ಪ್ರೇರಣೆ ನೀಡುತ್ತಿದ್ದಾರೆ. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಈ ರೀತಿಯ ಅಧಿಕಾರ ಇನ್ನೆಷ್ಟು ದಿನ ನಡೆಸುತ್ತೀರಿ
ಎಂದರು.
ಹೆಚ್ಡಿ ಕುಮಾರಸ್ವಾಮಿ ಜನತಾದರ್ಶನ ಮಾಡ್ತಿದ್ದಾನೆಂದು ತರಾತುರಿಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗೆ ಜನತಾದರ್ಶನಮಾಡುವ ಅವಕಾಶವಿದೆ. ರಾಜ್ಯ ಸರ್ಕಾರಕ್ಕೆ ಅಲ್ಪಸ್ವಲ್ಪವಾದರೂ ಜ್ಞಾನ ಇದೆಯಾ ಎಂದು ಪ್ರಶ್ನಿಸಿದರು. ನಾನು ರಾಜ್ಯ ಸರ್ಕಾರದ ಶಿಷ್ಟಾಚಾರ ನಂಬಿ ರಾಜಕಾರಣ ಮಾಡುತ್ತಿಲ್ಲ. ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿರುವುದರಲ್ಲಿ ಸಂಶಯವೇ ಇಲ್ಲ. ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡುತ್ತಿದ್ದಾರೆಂದು ವಾಗ್ದಾಳಿ ಮಾಡಿದರು.
HMT ಭೂಮಿ ಯಾರು ಯಾರು ಹೊಡೆದಿದ್ದೀರಿ, ಅದರ ಬಗ್ಗೆ ತನಿಖೆ ಮಾಡುತ್ತಿರಾ? ರಾಜ್ಯ ಸರ್ಕಾರಕ್ಕೆ ಬರುತ್ತಿದ್ದ ಆದಾಯದ ಬಗ್ಗೆ ಚಿಂತೆ ಮಾಡಿದ್ದೀರಾ? ನಾನು ಕಡುಬು ತಿನ್ನಲು ಕುಳಿತಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಜಾಗಟೆ ಬಾರಿಸಿದ್ದರು