ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಶಾಸಕ ಜನಾರ್ದನ ರೆಡ್ಡಿಯವರು ಹಾಡಿ ಹೊಗಳಿದ್ದು, ಈ ಮೂಲಕ ಬಿಜೆಪಿಗೆ ಸೇರ್ಪಡೆ ಅಥವಾ ಬೆಂಬಲದ ಸುಳಿವು ನೀಡಿದ್ರಾ ಪ್ರಶ್ನೆ ಎದ್ದಿದೆ.
ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ (Congress) ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಹಿರಂಗವಾಗಿಯೇ ರೆಡ್ಡಿ ಮೋದಿಯನ್ನು ಹೊಗಳಿದ್ದಾರೆ. ಶ್ರೀರಾಮಮಂದಿರ ನಿರ್ಮಾಣದಲ್ಲಿ ಮೋದಿಜೀಯವರನ್ನು ಅಭಿನಂದಿಸಬೇಕು. ಮೋದಿಯವರು ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ. 500 ವರ್ಷದ ಹೋರಾಟಕ್ಕೆ ಫಲ ಇದೀಗ ಬಂದಿದೆ ಎಂದರು.
ಗಂಗಾವತಿಯ ಅಭಿವೃದ್ಧಿಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ (Iqbal Ansari) ಅಡ್ಡಿ ಆಗುತ್ತಿದ್ದಾರೆ. ಸೋಲಿನ ಹತಾಶೆ ಇಕ್ಬಾಲ್ ಅನ್ಸಾರಿಯನ್ನು ಕಾಡುತ್ತಿದೆ. ಗಂಗಾವತಿ ಅಭಿವೃದ್ಧಿಗೆ ಸಹಕಾರ ಕೊಡುತ್ತಿಲ್ಲ. ಕ್ಲುಲ್ಲಕ ವಿಚಾರದಲ್ಲೂ ಅಭಿವೃದ್ಧಿಯಲ್ಲಿ ಅಡ್ಡಿ ಆಗುತ್ತಿದ್ದಾರೆ. ಎಂಪಿ ಚುನಾವಣೆ ಆದ ಮೇಲೆ ಕಾಂಗ್ರೆಸ್ ನವರು ಇಕ್ಬಾಲ್ ಅನ್ಸಾರಿಯನ್ನು ಡಸ್ಟ್ ಬಿನ್ಗೆ ಹಾಕುತ್ತಾರೆ ಎಂದು ಕಿಡಿಕಾರಿದ್ದಾರೆ