ಚಾಮರಾಜನಗರ: ಜಾಂಬವಂತನ ಹುಲಿರಾಯ ಬೇಟೆಯಾಡಿದ್ದಾನೆ. ಹೌದು ಬಂಡೀಪುರ ಸಫಾರಿಗೆ ತೆರಳಿದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ರೋಚಕ ದೃಶ್ಯ ಸೆರೆಯಾಗಿದೆ. ನೀರು ಕುಡಿಯಲು ಬಂದ ಕರಡಿಯನ್ನ ಹುಲಿ ಬೇಟೆಯಾಡಿದೆ. ಕರಡಿ ಮೇಲೆ ದಾಳಿ ಮಾಡಿ ಕೊಂದು ತಿಂದಿದೆ ಹುಲಿ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳಿದ ವೇಳೆ ಹುಲಿ ಬೇಟೆಯಾಡುವ ದೃಶ್ಯ ಸೆರೆ ಆಗಿದೆ. ಹುಲಿಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಕರಡಿ ಒದ್ದಾಡಿದೆ. ಕೊನೆಗೂ ಹುಲಿಯ ಬಾಯಿಗೆ ಸಿಲುಕಿ ಒದ್ದಾಡಿ ಒದ್ದಾಡಿ ಜಾಂಬವಂತ ಪ್ರಾಣ ಬಿಟ್ಟಿದೆ..