ಆನೇಕಲ್: ಅವ್ರು ಯಾವುದೇ ಕ್ರೈಮ್ ಮಾಡ್ಲಿಲ್ಲ. ಆದ್ರು ಅವರ ಪರಿಸ್ಥಿತಿ ಜೈಲು ವಾಸಿಗಳಂತಾಗಿದೆ. ಹಣವಿದ್ರು ಅದೊಂದು ಸಮಸ್ಯೆ ಅವರಿಗೆ ಅನ್ನ, ಆಹಾರಕ್ಕು ಮಾತ್ರವಲ್ಲದೆ ತುರ್ತು ಸಂದರ್ಭದಲ್ಲಿ, ಅಂಬ್ಯುಲೆನ್ಸ್, ಪೊಲೀಸ್ ಮತ್ತು ಫೈರ್ ಮನೆ ಮಂದಿ ಸಂಬಂಧಿಕರನ್ನು ಸಂಪರ್ಕಿಸಲು ಪರದಾಡುವಂತಾಗಿದೆ. ಅಷ್ಟಕ್ಕೂ ಅಲ್ಲಿನ ವಾಸಿಗಳ ಬದುಕು ಜೈಲು ಹಕ್ಕಿಗಳಂತಾಗಿದ್ದಾದರೂ ಯಾಕೇ ಅಂತೀರಾ…..? ಈ ಸ್ಟೋರಿ ನೋಡಿ…..
HSRP ನಂಬರ್ ಪ್ಲೇಟ್ ಬದಲಾವಣೆ ಮಾಡಿಲ್ವಾ!?.. ಹಾಗಿದ್ರೆ ಈ ಸಂಕಷ್ಟ ಎದುರಿಸಲು ಸಿದ್ಧರಾಗಿ!
ಹೌದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳು ಮೊಬೈಲ್ ಬಳಕೆಗೆ ಬ್ರೇಕ್ ಹಾಕಲು ಅಳವಡಿಸಿರುವ ಮೊಬೈಲ್ ನೆಟ್ವರ್ಕ್ ಜಾಮರ್ ಸುತ್ತಮುತ್ತಲಿನ ವಾಸಿಗಳ ನೆಮ್ಮದಿಗೆ ಬ್ರೇಕ್ ಹಾಕಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಎದುರಾಗಿದೆ. ಜೈಲಿನ ಸುತ್ತಮುತ್ತಲಿನ ನಿವಾಸಿಗಳ ಜೀವನ ದುಸ್ತರವಾಗಿದೆ. ನೆಟ್ವರ್ಕ್ ಸಮಸ್ಯೆಯಿಂದಾಗಿ ಯಾವುದೇ ತುರ್ತು ಸಂದರ್ಭಗಳಲ್ಲಿ ಪೊಲೀಸ್, ಫೈರ್ ಮತ್ತು ಅಂಬ್ಯುಲೆನ್ಸ್ ಸೇವೆಗೆ ಕರೆ ಮಾಡಲು ಸಾಧ್ಯವಾಗಿತ್ತಿಲ್ಲ. ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಸ್ ಟ್ರಾಕ್ ಮಾಡಲು ಸಾಧ್ಯವಾಗುತ್ತಿಲ್ಲ. ಶಾಲೆಯಿಂದ ಮಕ್ಕಳು ಮರಳಿ ಕರೆತರಲು ಸಾದ್ಯವಾಗುತ್ತಿಲ್ಲ. ಐಟಿಬಿಟಿ ಉದ್ಯೋಗಿಗಳು ವರ್ಕ್ ಪ್ರಮ್ ಹೋಮ್ ಕೆಲಸ ಮಾಡಲು ಆಗುತ್ತಿಲ್ಲ. ಸ್ವಿಗ್ಗಿ ಜೋಮ್ಯಾಟೋದಿಂದ ಪುಡ್ ಆರ್ಡರ್ ಮಾಡಲು ಒಟಿಪಿ ಕೂಡ ನೀಡಲು ಸಾಧ್ಯವಾಗುತ್ತಿಲ್ಲ. ತುರ್ತು ಕರೆ ಸೇರಿದಂತೆ ಯಾವುದೇ ಕರೆ ಸ್ವೀಕರಿಸಲು ಎರಡು ಕಿ.ಮಿ ದೂರ ಹೋಗಬೇಕಿದೆ ಎಂದು ಅಪಾರ್ಟ್ಮೆಂಟ್ ವಾಸಿಗಳು ಜೈಲು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮೊಬೈಲ್ ಜಾಮರ್ ಅಳವಡಿಕೆ ಮಾಡಿಲ್ಲ. ಬದಲಾಗಿ ಸ್ಥಳೀಯರನ್ನು ಒಕ್ಕಲೆಬ್ಬಿಸಲು ಉದ್ದೇಶ ಪೂರ್ವಕವಾಗಿ ಮೊಬೈಲ್ ಜಾಮರ್ ಅಳವಡಿಕೆ ಮಾಡಲಾಗಿದೆ. ಕಾರಾಗೃಹದ ಅಕ್ಕಪಕ್ಕದ ಆಸ್ತಿಗಳನ್ನು ಖಾಲಿ ಮಾಡಿಸುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಜೈಲಿನ ಸುತ್ತಮುತ್ತಲಿನ 2 ಕಿ.ಮಿ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಿಗದೆ ಮೆಸೇಜ್ ಮತ್ತು ಪೋನ್ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ಭ್ರಷ್ಟ ಜೈಲು ಅಧಿಕಾರಿಗಳು ಜೈಲುವಾಸಿಗಳಿಗೆ ಹಣಕ್ಕಾಗಿ ಮೊಬೈಲ್ ನೀಡುವುದು. ಅಕ್ರಮ ಮೊಬೈಲ್ ಬಳಕೆ ನಿಯಂತ್ರಿಸಲು ಮೊಬೈಲ್ ನೆಟ್ವರ್ಕ್ ಜಾಮರ್ ಅಳವಡಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜೈಲಿನ ಜೈಲುವಾಸಿಗಳು ಇಂದಿಗೂ ಮೊಬೈಲ್ ಬಳಸುತ್ತಿದ್ದು, ಅವರಿಗೆ ಮೊಬೈಲ್ ನೆಟ್ವರ್ಕ್ ಜಾಮರ್ ಯಾವುದೇ ಎಫೆಕ್ಟ್ ಆಗುತ್ತಿಲ್ಲ. ಆದ್ರೆ ಏನೂ ತಪ್ಪು ಮಾಡದ ಸುತ್ತಮುತ್ತಲಿನ ಸಾವಿರಾರು ಸ್ಥಳೀಯ ವಾಸಿಗಳಿಗೆ ಮೊಬೈಲ್ ನೆಟ್ವರ್ಕ್ ಜಾಮರ್ ನಿಂದ ಶಿಕ್ಷೆ ಅನುಭವಿಸುವಂತಾಗಿದೆ.