ಬೆಂಗಳೂರು:- ರಾಜ್ಯದಲ್ಲಿ ಸದ್ಯ ದರ್ಶನ್ ಮೇಲಿರುವ ಕೊಲೆ ಪ್ರಕರಣ ಹಾಗೂ ಸಿಎಂ ಸಿದ್ದರಾಮಯ್ಯ ಮೇಲಿರುವ ಮೂಡ ಹಗರಣ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೊಟ್ಟಿರುವ ಹೇಳಿಕೆ, ರಾಜ್ಯ ಕೈ ನಾಯಕರನ್ನು ಕೆರಳಿ ಕೆಂಡವಾಗಿಸಿದೆ. ಹಾಗಿದ್ರೆ ಆ ಸ್ಟೋರಿ ಏನು ನೋಡೋಣ.
ಸದ್ಯ ರಾಜ್ಯ ರಾಜಕಾರಣದಲ್ಲಿ ಕೋಲಾಹಲವೇ ಏರ್ಪಟ್ಟಿದೆ. ಮೂಡ ಹಗರಣ ಸಿಎಂ ಸಿದ್ದರಾಮಯ್ಯಗೆ ತಲೆಬಿಸಿ ತಂದಿದೆ. ಈ ನಡುವೆ ಕೇಂದ್ರ ಸಚಿವರು ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣ ಡೈವರ್ಟ್ ಮಾಡಲು, ಮಾಧ್ಯಮದ ಮುಂದೆ ಹಗರಣದಿಂದ ತಪ್ಪಿಸಿಕೊಳ್ಳುವ ದುರಾಲೋಚನೆಯಿಂದ ದರ್ಶನ್ ಜೈಲಿನಲ್ಲಿರುವ ಪೋಟೋ ವೈರಲ್ ಆಗಿದೆ.ರಾಜ್ಯ ಕಾಂಗ್ರೆಸ್ ಸರ್ಕಾರವೇ ಫೋಟೋವನ್ನು ವೈರಲ್ ಮಾಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದ್ದಾರೆ.
ಜೋಶಿಯವರ ಹೇಳಿಕೆಗೆ ರಾಜ್ಯ ಕೈ ನಾಯಕರು ಆಕ್ರೋಶ ಹೊರಹಾಕಿದ್ದಾರೆ.ದರ್ಶನ್, ಮೂಡಾ ವಿಚಾರ ಬಿಡಿ.. ಮಹದಾಯಿ ವಿಚಾರದಲ್ಲಿ ಏನಾಗಿದೆ ಮಾತನಾಡಿ.. ಮೊದಲು ಭದ್ರಾ ಮೇಲ್ದಂಡೆ ಯೋಜನೆಯ 5,300 ಕೋಟಿ ದುಡ್ಡುಕೊಡಿಸ್ರಪ್ಪ ಎಂದು ಡಿಸಿಎಂ ಡಿ.ಕೆ ಶಿವಕುಮಾರ್,ಪ್ರಹ್ಲಾದ್ ಜೋಶಿಗೆ ಟಾಂಗ್ ಕೊಟ್ಟಿದ್ದಾರೆ.
ಇನ್ನು ಪ್ರಹ್ಲಾದ್ ಜೋಶಿ ಹೇಳಿಕೆಗೆ ಸಚಿವ ಎಂ.ಬಿ ಪಾಟೀಲ್ ತಿರುಗೇಟು ಕೊಟ್ಟಿದ್ದು, ದರ್ಶನ್ ರಾಜಾತೀಥ್ಯ ಗಂಭೀರವಾದುದು. ನಾನು ಹೋಮ್ ಮಿನಿಸ್ಟರ್ ಆಗಿದ್ದಾಗ್ಲೂ
ಜೈಲಿನಲ್ಲಿ ಇಂತಹ ವ್ಯವಸ್ಥೆ ನೋಡಿದ್ದೇನೆ. ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಅದಕ್ಕಾಗಿ ಎಲ್ಲರನ್ನೂ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಫೋಟೋ ಲೀಕ್ ಬಗ್ಗೆಯೂ ತನಿಖೆ ಆಗಲಿದೆ. ಮುಡಾ ಡೈವರ್ಟ್ ಮಾಡೋಕೆ ಅದರಲ್ಲಿ ಏನಾಗಿದೆ..?
ತಿಳಿದವರು ಸುಮ್ಮನೆ ಮಾತನಾಡೋದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಾರೆ, ರಾಜ್ಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ಮೂಡಾ ಹಗರಣ ಹಾಗೂ ದರ್ಶನ್ ಜೈಲಿನಲ್ಲಿರುವ ಫೋಟೋ ರಿಲೀಸ್ಗೆ ಲಿಂಕ್ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಕೈ ನಾಯಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.