ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ್ದ ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಹುಲಿ ಉಗುರಿನ ಪೆಂಡೆಂಟ್ ಧರಿಸೋದು ಕಾನೂನು ಅಡಿಯಲ್ಲಿ ಶಿಕ್ಷಾರ್ಹಪರಾಧ ಎಂದು ಗೊತ್ತಿದ್ದರೂ ಪೆಂಡೆಂಟ್ ಹಾಕಿಕೊಂಡಿದ್ದು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದ್ದರು. ವರ್ತೂರು ಜೈಲಿಗೆ ಹೋಗುತ್ತಿದ್ದಂತೆಯೇ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಈ ಹುಲಿ ಉಗುರಿನ ಚೈನು ಧರಿಸಿರೋದು ಬೆಳಕಿಗೆ ಬಂದಿದ್ದು, ಅದರಲ್ಲಿ ಜಗ್ಗೇಶ್ ಕೂಡ ಸೇರಿಕೊಂಡಿದ್ದರು.
ನಟ ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ದರ್ಶನ್, ಆರ್ಯವರ್ಧನ್ ಗುರೂಜಿ, ನಟಿ ಅಮೂಲ್ಯ ಮಕ್ಕಳು ಹೀಗೆ ಅನೇಕರು ಹುಲಿ ಉಗುರಿನ ಪೆಂಡೆಂಟ್ ಧರಿಸಿ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲೂ ಜಗ್ಗೇಶ್ ಈ ಪ್ರಕರಣದಲ್ಲಿ ಇನ್ನೇನು ಬಂಧನವಾಗುತ್ತಾರೆ ಅಂತೆಲ್ಲ ಸುದ್ದಿ ಹರಿದಾಡಿತ್ತು.
ಇಂತಹ ಸುದ್ದಿಯಿಂದ ಬೇಸತ್ತಿದ್ದ ಜಗ್ಗೇಶ್, ಮಾಧ್ಯಮಗಳಲ್ಲಿ ಸುದ್ದಿ ಬಾರದಂತೆ ತಡೆಗಟ್ಟುವುದಾಗಿ ಕೋರ್ಟ್ ಮೆಟ್ಟಿಲು ಏರಿದ್ದರು. ಇದಕ್ಕೆ ಸಹಾಯ ಮಾಡಿದ್ದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಜಗೇಶ್ ಇದೀಗ ತಿಳಿಸಿದ್ದಾರೆ.
ರಂಗನಾಯಕ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಈ ವಿಷಯ ತಿಳಿಸಿದ ಜಗ್ಗೇಶ್, ಸುದ್ದಿಗಳ ಹಾವಳಿಯನ್ನು ತಡೆಯೋಕೆ ಆಗದೇ ನಾನು ಡಿ.ಕೆ.ಶಿವಕುಮಾರ್ ಅವರ ಮೊರೆ ಹೋದೆ. ಅವರು ಯಾರಿಗೆ ತಿಳಿಸಬೇಕೋ ತಿಳಿಸಿದರು. ಅಲ್ಲಿಗೆ ನಾನು ಬಚಾವ್ ಆದೆ. ಅನಿವಾರ್ಯವಾಗಿ ನಾನು ಕೋರ್ಟಿನಿಂದ ಸ್ಟೇ ತರಬೇಕಾಯಿತು ಎಂದರು.