ವಿಜಯಪುರ: ಜಗನ್ ಮೋಹನ್ ರೆಡ್ಡಿ ಅವರು ಸಿಎಂ ಆದ ಸಂದರ್ಭದಲ್ಲಿ ಇಡೀ ಪ್ರಪಂಚಕ್ಕೆ ಮಾಡಿದ್ದು ಮೋಸ. ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸುವ ಕೆಲಸವಾಗಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿಜಯಪುರದಲ್ಲಿಹೇಳಿದರು.
ತಿರುಪತಿ ಲಡ್ಡುವಿನಲ್ಲಿ ಪ್ರಾಣಿಕೊಬ್ಬು ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿದೇಶಿ ಕ್ರಿಸ್ಚಿಯನ್ ಮಷಿನರಿಗಳಿಂದ ಈ ತರಹ ನಡೆದಿದೆ. ಹಿಂದುತ್ವ ಪ್ರತಿಪಾದಕರಿಗೆ, ಹಿಂದೂಗಳ ಶ್ರದ್ಧೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಈಗಲೂ ನಾವು ಮಾಡಿಲ್ಲ ಎಂದು ಹೇಳುತ್ತಾರೆ. ಲ್ಯಾಬ್ ರಿಪೋರ್ಟ್ ಬಗ್ಗೆ ಇವರಿಗೆ ನಂಬಿಕೆ ಇಲ್ಲವಾ ಎಂದು ಪ್ರಶ್ನಿಸಿದರು.
ಲೈಂಗಿಕ ತೃಪ್ತಿಗಾಗಿ ಪದೇ ಪದೇ ವಯಾಗ್ರ ಮಾತ್ರೆ ಸೇವಿಸಿದರೆ ಈ ಸಮಸ್ಯೆಗಳು ಬರುವುದು ಗ್ಯಾರಂಟಿ!
ನಮ್ಮ ಶ್ರದ್ಧೆ ಹಾಗೂ ಶ್ರದ್ಧಾಕೇಂದ್ರಕ್ಕೆ ಅಪಮಾನ ಮಾಡುವವರಿಗೆ ಇದು ಅಂತ್ಯವಾಗಬೇಕು. ಇದರಲ್ಲಿ ವಿದೇಶಿ ಸಂಚಿದೆ, ಈ ಪ್ರಕರಣ ಸಿಬಿಐಗೆ (CBI) ತನಿಖೆಗೆ ಕೊಡಬೇಕು. ದೇವರ ದಯೆಯಿಂದ ಇಡೀ ದೇಶದ ಎಲ್ಲ ಪಕ್ಷದ ನಾಯಕರು ಇದನ್ನು ಖಂಡಿಸಿದ್ದಾರೆ. ಇದು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಹೇಳಿದ್ದಾರೆ. ತಿರುಪತಿ ತಿಮ್ಮಪ್ಪನ ಬಗ್ಗೆ ಇರುವ ಶ್ರದ್ಧೆಯಿಂದ ಎಲ್ಲರೂ ಇದನ್ನು ಖಂಡಿಸಿದ್ದಾರೆ ಎಂದು ಹೇಳಿದರು.