ಮಾರುಕಟ್ಟೆಯಲ್ಲಿ ಮಾವು, ಹಲಸಿನ ಘಮಲಿದೆ. ಜಿಲ್ಲೆಯ 4 ತಾಲೂಕು ಸೇರಿದಂತೆ ರಾಜ್ಯದಲ್ಲಿ ಹಲಸಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಆದರೆ, ಈ ಬಾರಿ ಹಲಸು ಬೇಡಿಕೆಯ ನಡುವೆ ಅದರ ಫಸಲು ಗಣನೀಯ ಇಳಿಕೆ ಕಂಡಿದೆ. ಉತ್ತಮ ದರ ಇರುವುದರಿಂದ ಬೆಳೆಗಾರ ಕೊಂಚ ನಿರಾಳವಾಗಿದ್ದರೂ ಗ್ರಾಹಕರಿಗೆ ಹಲಸು ಭಾರವಾಗುತ್ತಿದೆ.
ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹಲಸಿಗೆ ಸ್ಥಳೀಯ ಹಾಗೂ ಅಂತರ ಜಿಲ್ಲೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಇದರ ಜತೆಗೆ ಸ್ಥಳೀಯ ಹಲಸುಗಳಿಗೂ ಬೇಡಿಕೆ ಹೆಚ್ಚಾಗಿದೆ. 3 ವರ್ಷದಿಂದ ನಾನಾ ಕಾರಣಗಳಿಂದ ಫಸಲು ಕುಸಿಯುತ್ತಿದೆ.
ರೈತರೇ ಗಮನಿಸಿ.. ಸಪೋಟ ಹಣ್ಣಿನ ಕೃಷಿಯಿಂದ ಗಳಿಸಬಹುದು ಲಕ್ಷಗಟ್ಟಲೇ ಆದಾಯ..!
ಆದರೆ, ಪ್ರತಿ ವರ್ಷ ಮೇ ತಿಂಗಳಲ್ಲಿ ಬೆಂಗಳೂರು ಗ್ರಾಮಾಂತರ, ಕರಾವಳಿ ಜಿಲ್ಲೆಗಳನ್ನು ಒಳಗೊಂಡಂತೆ, ಲಾಲ್ ಬಾಗ್ ನಲ್ಲೂ ಹಲಸಿನ ಮೇಳಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಚುನಾವಣೆ ಕಾರಣದಿಂದ ಮೇಳಗಳೂ ನಡೆಯುತ್ತಯೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಹವಾಮಾನ ವೈಪರೀತ್ಯಗಳಿಂದ ಫಸಲು ಕುಸಿದ ಪರಿಣಾಮ ಹಣ್ಣುಗಳ ದರದಲ್ಲಿ ಮೇಲೆ ಪರಿಣಾಮ ಬೀರಿದೆ.
ಈ ಬಾರಿ ಮಾವಿನ ಫಸಲು ಕುಸಿತದಿಂದ ಮಾವಿನ ದರ ಭಾರಿ ಏರಿಕೆ ಕಂಡಿದೆ. ಈಗ ಹಲಸಿನ ಸರದಿ 2021 ರಲ್ಲಿ ಪ್ರತಿ ಕೆಜಿಗೆ 6 ರಿಂದ 10 ರೂ. ಸಿಗುತ್ತಿದ್ದ ಹಲಸು 2022 ರಲ್ಲಿ 12-15 ರೂಪಾಯಿಗೆ ಏರಿಕೆ ಕಂಡಿತ್ತು. 2023 ರಲ್ಲಿ 20 ರೂ. ವರೆಗೂ ಕೆಜಿ ಹಲಸು ಮಾರಾಟವಾಗಿತ್ತು. ಸದ್ಯ 25ರೂ. ದರದ ವರೆಗೂ ಬೆಲೆ ಏರಿಕೆ ಕಂಡಿದ್ದು, ಪ್ರತಿ ಹಲಸಿನ ಹಣ್ಣು 50-150 ರೂ. ವರೆಗೂ ದರದಲ್ಲಿ ಹಲಸು ಮಾರಾಟವಾಗುತ್ತಿದೆ.