ಕಣ್ಸನ್ನೆ ಮೂಲಕ ರಾತ್ರೋ ರಾತ್ರಿ ನ್ಯಾಷನಲ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಸೌತ್ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸಿನಿಮಾಗಳಲ್ಲಿ ನಿರೀಕ್ಷಿಸಿದಷ್ಟು ಖ್ಯಾತಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಾಂಪ್ರದಾಯಿಕ ಉಡುಗೆಯಲ್ಲಿ ಈಜುಕೊಳಕ್ಕಿಳಿದ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ.
ಇತ್ತೀಚೆಗಷ್ಟೇ ನಟಿ ಶೇರ್ ಮಾಡಿರುವ ಫೋಟೋಗಳಿಗೆ ಹುಡುಗರು ಹಾರ್ಟ್, ಫೈರ್ ಎಮೋಜಿ ಹಾಕುತ್ತಿದ್ದಾರೆ. ನಟಿಯ ಗ್ಲಾಮರ್ ಭಂಗಿಗಳನ್ನು ನೋಡಿದ ಪಡ್ಡೆ ಹುಡುಗರ ಫುಲ್ ಫಿದಾ ಆಗಿದ್ದಾರೆ.
ಮೊದಲ ಸಿನಿಮಾದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ನಟಿ ಆ ಬಳಿಕ ಸೈಲೆಂಟ್ ಆಗಿ ಬಿಟ್ಟರು. ಒಂದೇ ಒಂದು ಹಿಟ್ ಸಿನಿಮಾಗಾಗಿ ನಟಿ ಎದುರು ನೋಡ್ತಿದ್ದಾರೆ.ಆದರೆ ಆಕೆಗೆ ಹೇಳಿಕೊಳ್ಳುವ ಯಶಸ್ಸು ಸಿಗುತ್ತಿಲ್ಲ.
ನಟಿ ಸಾಮಾಜಿಕ ಮಾಧ್ಯಮದಲ್ಲಿ 7.5 ಮಿಲಿಯನ್ ಫಾಲೋವರ್ಸ್ನೊಂದಿಗೆ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹಾಗಾಗಿಯೇ ಆಕೆ ಶೇರ್ ಮಾಡಿರುವ ಬೋಲ್ಡ್ ಚಿತ್ರಗಳಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಪ್ರಿಯಾ ಅವರ ಇತ್ತೀಚಿನ ಫೋಟೋಗಳನ್ನು ನೋಡಿ, ಯುವಕರು ಅವರು ಹಾಟ್ ಎಂದಿದ್ದಾರೆ. ಬ್ಯೂಟಿಫುಲ್ ಹುಡುಗಿ ಎಂದು ಹಾಟ್ ಕಾಮೆಂಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಆದರೆ ಈ ಫೋಟೋಗಳಲ್ಲಿ ಪ್ರಿಯಾ ಅವರ ಲುಕ್ ತುಂಬಾ ಬೋಲ್ಡ್ ಕೂಡಾ ಆಗಿದೆ.
ಸ್ಲೀವ್ ಲೆಸ್, ಟಾಪ್ ಲೆಸ್ ಸಿಲ್ಕ್ ಡ್ರೆಸ್ ನಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ್ದ ಪ್ರಿಯಾ ಎರಡು ಕೈಗಳಲ್ಲಿ ಮಲ್ಲಿಗೆ ಹೂವನ್ನು ಕಟ್ಟಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ.