ಲಕ್ನೋ: ಈ ಹಿಂದೆ ಅಯೋಧ್ಯೆಗೆ ಹೋಗಲು ಹಿಂದೇಟು ಹಾಕುತ್ತಿದ್ದವರು ಇದೀಗ ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ಬಯಸುತ್ತಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ.
ಮಥುರಾದಲ್ಲಿ (Mathura) ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ಕಾಲದಲ್ಲಿ ಅಯೋಧ್ಯೆಗೆ ಹೋಗಲು ಹಿಂದೇಟು ಹಾಕುತ್ತಿದ್ದ ಜನ ಈಗ ಜನವರಿ 22 ರಂದು ರಾಮಮಂದಿರ (Ram Mandir) ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಕೆಲವರು ದೂರುತ್ತಿದ್ದಾರೆ ಎಂದು ಟಾಂಗ್ ನೀಡಿದರು.
Cashews Benefits: ಪ್ರತಿದಿನ ಗೋಡಂಬಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನವಿದೆ ಗೊತ್ತಾ..?
ಇದೇ ವೇಳೆ ಸಿಎಂ ಅವರು, ಬಿಜೆಪಿ (BJP) ಸರ್ಕಾರದ ಆಡಳಿತದಲ್ಲಿ ದೇವಸ್ಥಾನದ ಸುತ್ತಮುತ್ತ ಆಗಿರುವ ಬೃಹತ್ ಅಭಿವೃದ್ಧಿಯನ್ನು ವಿವರಿಸಿದರು. ಈ ಹಿಂದೆ ರಸ್ತೆಗಳು ಕೂಡ ಕಳಪೆ ಸ್ಥಿತಿಯಲ್ಲಿದ್ದು, ನಗರಕ್ಕೆ ಸಂಪರ್ಕ ಕಲ್ಪಿಸುವ ಒಂದೇ ರೈಲು ಮಾರ್ಗವಿತ್ತು. ಆದರೆ ಈಗ ಎಲ್ಲಾ ಕಡೆಯಿಂದ ನಾಲ್ಕು ಪಥದ ಸಂಪರ್ಕವಿದೆ. ಜನವರಿ 22 ರ ನಂತರ ಅಯೋಧ್ಯೆಗೆ ಭೇಟಿ ನೀಡುವುದು ತ್ರೇತಾ ಯುಗವನ್ನು ನೆನಪಿಸುತ್ತದೆ ಎಂದರು.