ಹುಬ್ಬಳ್ಳಿ : ಇಲ್ಲಿನ ಆಕಾಶ ಬುಟ್ಟಿ ಹಬ್ಬದ ತಂಡದ ವತಿಯಿಂದ ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬವನ್ನು ಜ. 5ರಂದು ಸಂಜೆ 6 ಗಂಟೆಗೆ ಮೂರು ಸಾವಿರ ಮಠದ ಗಂಗಾಧರ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬ ಆಯೋಜನಾ ಸಮಿತಿ ಅಧ್ಯಕ್ಷ ರಾಜು ಜರತಾರಘರ ಹೇಳಿದರು.
ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ ಆಗಿರೋದು ನಿಜ: ಛಲವಾದಿ ನಾರಾಯಣಸ್ವಾಮಿ!
ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಸತಾನ ಹಿಂದು ಧರ್ಮದ ಪವಿತ್ರ ಹಬ್ಬವಾದ ಕಾರ್ತಿಕ ಮಾಸವನ್ನು ಇಂದಿನ ಯುವ ಪೀಳಿಗೆಗೆ ಪರಚಿಯಿಸುವ ಉದ್ದೇಶದಿಂದ ಪ್ರತಿವರ್ಷ ಆಕಾಶ ಬುಟ್ಟಿ ಹಬ್ಬ ಆಚರಿಸಸಲಾಗಿತ್ತದೆ ಎಂದು ಹೇಳಿದರು.ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಪ್ರಸಕ್ತ ವರ್ಷದ ಆಕಾಶ ಬುಟ್ಟಿ ಹಬ್ಬವನ್ನು ಸಮರ್ಪಿಸಲಾಗುತ್ತಿದೆ. ಸಮಾರಂಭದ ಸಾನಿಧ್ಯ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಜಿ ವಹಿಸುವರು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕಾಶಬುಟ್ಟಿ ಹಬ್ಬಕ್ಕೆ ಚಾಲನೆ ನೀಡುವರು. ಶಾಸಕ ಮಹೇಶ ಟೆಂಗಿನಕಾಯಿ, ಸ್ವರ್ಣ ಗ್ರುಪ್ ಕಂಪನಿ ಚೇರ್ಮನ್ ಡಾ. ವಿ.ಎಸ್.ವಿ. ಪ್ರಸಾದ, ವಿಕೆ ಫೌಂಡೇಶನ್ ಸಂಸ್ಥಾಪಕ ವೆಂಕಟೇಶ ಕಾಟವೆ ಹಾಗೂ ಇತರ ಜನಪ್ರತಿಧಿನಿಗಳು ಭಾಗವಹಿಸುವರು.
ವಿವಿಧ ಆಕಾರದ ಆಕಾಶ ಬುಟ್ಟಿ ತಯಾರಿಸಿ, ಆಕಾಶಕ್ಕೆ ಹಾರಿಬಿಡುವ ಸ್ಪರ್ಧೆ ಆಯೋಜಿಸಿದ್ದು, ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಸಾರ್ವಜನಿಕರಿಗೆ ಲಕ್ಕಿ ಕೂಪನ್ ಮುಖಾಂತರ ಬಹುಮಾನ ಕೊಡಲಾಗುವುದು. ಮಹಿಳೆಯರಿಗೆ ರಂಗೋಲಿ, ಮೆಹಂದಿ ಸೇರಿದಂತೆ ವಿವಿಧ ಸ್ಪರ್ಧೆಗನ್ನು ಏರ್ಪಡಿಸಲಾಗಿದೆ ಎಂದರು.
ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ವೆಂಕಟೇಶ ಕಾಟವೆ, ದತ್ತಮೂರ್ತಿ ಕುಲಕರ್ಣಿ, ದೇವದಾಸ ಹಬೀಬ, ಪ್ರಕಾಶ ಬುರಬುರೆ ಇದ್ದರು.