ಬೆಂಗಳೂರು:-ವಿಜಯೇಂದ್ರಗೆ ಬಚ್ಚಾ ಎಂದಿದ್ದು ತಪ್ಪು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸಾಲ ಕೊಡದ್ದಕ್ಕೆ ಅಪ್ರಾಪ್ತೆಯೊಂದಿಗೆ ಮದುವೆ ; ಇಬ್ಬರ ವಿರುದ್ಧ ಫೋಕ್ಸೋ ಕೇಸ್
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಿತ್ತು, ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಮೀಶನ್ ಪ್ರಮಾಣ ಶೇಕಡ 50 ದಾಟಿದೆ ಎಂದರು.
ರಮೇಶ್ ಜಾರಕಿಹೊಳಿ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಬಚ್ಚಾ ಎಂಬ ಪದ ಬಳಸಿದ್ದು ತಪ್ಪು, ಶಾಸಕ ಹಾಗೆಲ್ಲ ಮಾತಾಡಬಾರದು, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಯ್ಕೆ ಮಾಡಿದ್ದಾರೆ, ಅದನ್ನು ಯಾರೂ ಮರೆಯಬಾರದು ಎಂದು ಜೋಶಿ ಹೇಳಿದರು.