ಐಪಿಎಲ್ 2025 ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕರಾಗಿ ರಜತ್ ಪಾಟಿದಾರ್ ಅವರನ್ನು ನೇಮಿಸಲಾಗಿದೆ, ಇದು ಅವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರಬೇಕಾ.? ಹಾಗಿದ್ರೆ ಈ ದಿನಗಳಲ್ಲಿ ಪೊರಕೆ ಖರೀದಿಸಬಾರದು.!
2021 ರಲ್ಲಿ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ 31 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಈಗ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಆರ್ಸಿಬಿ ಹಿಂದಿನ ನಾಯಕ ರಜತ್ ಅವರನ್ನು ಕೊಂಡಾಡಿದ್ದಾರೆ. ಅಧಿಕೃತವಾಗಿ ನಾನು ಜವಾಬ್ದಾರಿಯನ್ನು ನಿಮಗೆ ಹಸ್ತಾಂತರಿಸುತ್ತಿದ್ದೇನೆ. ಆರ್ಸಿಬಿಗೆ ನಾಯಕನಾಗಿರುವುದು ನಿಜಕ್ಕೂ ವಿಶೇಷ. ಕ್ಯಾಪ್ಟನ್ ಆಗಲು ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ.
ನಾಯಕತ್ವದ ನೊಗ ಹೊರುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಇನ್ನೊಂದು ಮುಖ್ಯ ವಿಚಾರ ಏನೆಂದರೆ ಚೆನ್ನಾಗಿ ಆಡೋದನ್ನ ಮರೆಯದಿರಿ. ಸಿಕ್ಸರ್ಗಳನ್ನು ಬಾರಿಸುತ್ತಲೇ ಇರಿ ಎಂದು ಶುಭ ಹಾರೈಸಿದ್ದಾರೆ.
2022 ರಿಂದ ಫಾಫ್ ಆರ್ಸಿಬಿ ನಾಯಕರಾಗಿ ಜವಾಬ್ದಾರಿ ತೆಗೆದುಕೊಂಡಿದ್ದರು. ಮೂರು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದ ಡುಪ್ಲೆಸಿಸ್, ಆರ್ಸಿಬಿಯ ಟ್ರೋಫಿ ಬರ ನೀಗಿಸುವಲ್ಲಿ ವಿಫಲರಾಗಿದ್ದರು. ಅದೇ ಕಾರಣಕ್ಕೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಡುಪ್ಲೆಸಿಸ್ ಅವರನ್ನು ಆರ್ಸಿಬಿ ಕೈಬಿಟ್ಟಿತ್ತು. ಇದೀಗ ಫಾಫ್ ಉತ್ತರಾಧಿಕಾರಿಯಾಗಿ ರಜತ್ ಪಾಟೀದಾರ್ ಹೆಗಲು ಕೊಟ್ಟಿದ್ದಾರೆ.