ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ನಾಚಿಕೆಯೇ ಆಗುವುದಿಲ್ಲವೇ? ಬರೀ ಸುಳ್ಳು ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು OBC ಜಾತಿಯಲ್ಲಿ ಹುಟ್ಟಿಲ್ಲ ಮತ್ತು ಅವರು ಗುಜರಾತ್ ಸಿಎಂ ಆದ ಮೇಲೆ OBC ಜಾತಿಯನ್ನು ಸೂಚಿಸಿದ್ದಾರೆ ಎಂದಿರುವ ರಾಹುಲ್ ಗಾಂಧಿ ಆರೋಪಕ್ಕೆ ಸಚಿವ ಜೋಶಿ ಅವರು ತಿರುಗೇಟು ನೀಡಿದ್ದು, ತಮ್ಮ X ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ನ (Congress) ಸುಳ್ಳಿನ ಬುತ್ತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸಮಯ ಬಂದಿದೆ. ವಾಸ್ತವ ಬೇರೆಯೇ ಇರುವಾಗ ಕಾಂಗ್ರೆಸ್ ಬರೀ ಸುಳ್ಳುಗಳನ್ನೇ ಹೆಣೆದು ಜನರ ಕಿವಿಗೆ ಹೂವಿನ ಗೊಂಚಲೇ ಇಡುತ್ತಿದೆ ಎಂದು ಕಿಡಿ ಕಾರಿದ್ದಾರೆ.