ಬೆಂಗಳೂರು: ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ದಟ್ಟಣೆ, ಸಂಚಾರ ದಟ್ಟಣೆ ಹೆಚ್ಚಾಗ್ತಿದೆ. ವಿಶ್ವದಲ್ಲೇ ಎರಡನೇ ಅತಿದೊಡ್ಡ ಸಂಚಾರ ದಟ್ಟಣೆಯ ನಗರ ಅನ್ನೋ ಅಪಖ್ಯಾತಿಗೆ ಒಳಗಾಗಿರುವ ಬೆಂಗಳೂರಿನ ಟ್ರಾಫಿಕ್ ಸಾಗರದ ಅಬ್ಬರಕ್ಕೆ ತಡೆಯೊಡ್ಡಲು, ಐಟಿಬಿಟಿ ಕಂಪನಿಗಳು ಇನ್ಸೆಂಟಿವ್ ಮೊರೆ ಹೋಗಿದೆ.
BREAKING: ಬೆಂಗಳೂರಲ್ಲಿ ಬೆಂಕಿ ಅವಘಡ: ಲಕ್ಷಾಂತರ ಮೌಲ್ಯದ ಆಯುರ್ವೇದಿಕ್ ಮೆಡಿಸಿನ್ ಅಗ್ನಿಗೆ ಆಹುತಿ!
ಟ್ರಾಫಿಕ್ ಸಾಗರ..ಇದು ಕಡಲನ್ನೇ ಹೊಂದಿರದ ರಾಜಧಾನಿಯ ಮಹಾ ಟ್ರಾಫಿಕ್ ಸಾಗರದ ದೃಶ್ಯ. ಈ ಟ್ರಾಫಿಕ್ ಸಮುದ್ರವನ್ನ ದಾಟೋದೆ ಬೆಂಗಳೂರಿಗರಿಗೆ ದೊಡ್ಡ ಚಾಲೆಂಜ್.ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗ್ತಾನೆ ಇದೆ. ಈ ಸಮಸ್ಯೆ ಮದ್ದು ಅರೆಯಲು ಸರ್ಕಾರ ಎಷ್ಟೇ ಸರ್ಕಸ್ ಮಾಡಿದ್ರೂ ಸಕ್ಸಸ್ ಆಗ್ತಿಲ್ಲ. ಕಾರಣ ನಗರದಲ್ಲಿ ಪ್ರತಿದಿನ ಸಾವಿರಾರು ಹೊಸ ವಾಹನಗಳು ರೋಡಿಗಿಳಿತಿದ್ದು ಟ್ರಾಫಿಕ್ ಜಾಮ್ ಒಂದಿಷ್ಟು ಕೊಡುಗೆ ನೀಡುತ್ತಿದೆ.
ಇನ್ನೂ ಐಟಿ ಬಿಟಿ ಕಂಪನಿಗನ್ನು ಹೊಂದಿರುವ ಬೆಂಗಳೂರಿನಲ್ಲಿ ಟ್ರಾಫಿಕ್ ನಿಂದ ಸರಿಯಾದ ಸಮಯಕ್ಕೆ ಟೆಕ್ಕಿಗಳು ಕಂಪನಿ ತಲುಪಲು ಸಾಧ್ಯವಾಗ್ತಿಲ್ಲ. ಹೀಗಾಗಿ ಸಾಕಷ್ಟು ಐಟಿಬಿಟಿ ಕಂಪನಿಗಳು ತನ್ನ ಟೆಕ್ಕಿಗಳಿಗೆ ವಾರದಲ್ಲಿ ಎರಡು ದಿನ ಪಬ್ಲಿಕ್ ಟ್ರಾನ್ಪೋರ್ಟ್ ಬಳಸಲು ಸೂಚನೆ ನೀಡಿದೆ. ಪಬ್ಲಿಕ್ ಟ್ರಾನ್ಪೋರ್ಟ್ ಬಳಸುವ ಟೆಕ್ಕಿಗಳಿಗೆ ಸ್ಯಾಲರಿ ಜೊತೆಯಲ್ಲಿ ಬೋನಸ್ ಆಗಿ ಇನ್ಸೆಂಟಿವ್ ಕೂಡ ನೀಡಲು ಮುಂದಾಗಿದೆ.
ಈಗಾಗಲೇ ಐಟಿಬಿಟಿ ಕಂಪನಿಗಳು ಟೆಕ್ಕಿಗಳಿಗೆ ಬಿಎಂಟಿಸಿ ಪಾಸ್, ಮೆಟ್ರೋ ಸ್ಮಾರ್ಟ್ ಕಾರ್ಡ್, ಅಥವಾ ಟೆಕ್ಕಿಗಳು ಪಬ್ಲಿಕ್ ಟ್ರಾನ್ಪೋರ್ಟ್ ಬಳಸಿದ ವೆಚ್ಚವನ್ನು ನೀಡಲು ಮುಂದಾಗಿವೆ. ಪಬ್ಲಿಕ್ ಟ್ರಾನ್ಪೋರ್ಟ್ ಬಳಸಲು ಉತ್ತೇಜನ ನೀಡಲು ಯಾವ ಟೆಕ್ಕಿ ತನ್ನ ಕಂಪನಿಗೆ ತನ್ನ ಸ್ವಂತ ಕಾರು,ಬೈಕ್ ನಲ್ಲಿ ಬರುತ್ತಾರೋ, ಅಂತವರ ವಾಹನಕ್ಕೆ ಪಾರ್ಕಿಂಗ್ ಚಾರ್ಜ್ ವಿಧಿಸುತ್ತಿವೆ ಇದರಿಂದ ಟೆಕ್ಕಿಗಳು ಪಾರ್ಕಿಂಗ್ ಚಾರ್ಜ್ ಕಟ್ಟುವ ಬದಲು ಪಬ್ಲಿಕ್ ಟ್ರಾನ್ಪೋರ್ಟ್ ಮೂಲಕ ಕಂಪನಿಗೆ ಬರ್ತಿದ್ದಾರಂತೆ.
ಒಟ್ನಲ್ಲಿ ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಐಟಿಬಿಟಿ ಕಂಪನಿಗಳು ತೆಗೆದುಕೊಂಡಿರುವ ಈ ನಿರ್ಧಾರ ಕೋಟ್ಯಾಂತರ ಜನರಿಗೆ ಮಾದರಿ ಆಗೋದ್ರಲ್ಲಿ ನೋ ಡೌಟ್. ಆದರೆ ಎಲ್ಲಾ ಕಂಪನಿಗಳು ಉತ್ತೇಜನ ನೀಡಲು ಮುಂದಾಗುತ್ತಾವ ಇಲ್ಲಾ ನಮಗೇಕೆ ಬೇಕು ಟ್ರಾಫಿಕ್ ಚಿಂತೆ ಅಂತಾ ಸುಮ್ಮನಾಗುತ್ತವ ಅನ್ನೋದನ್ನ ಕಾದು ನೋಡಬೇಕಾಗಿದೆ.