ರಾಜಸ್ಥಾನ ರಾಯಲ್ಸ್ ವಿರುದ್ಧ ಅಜೇಯ ಅರ್ಧಶತಕ ಸಿಡಿಸಿರುವ ಆರ್ಸಿಬಿ ಆರಂಭಿಕ ಆಟಗಾರ ವಿರಾಟ್ ಕೊಹ್ಲಿಗೆ ಈ ಲೀಗ್ನಲ್ಲಿ ಇದು ಮೂರನೇ ಅರ್ಧಶತಕವಾಗಿದೆ.
ಅಲ್ಲದೆ ಈ ಪಂದ್ಯದಲ್ಲಿ 34 ರನ್ ಬಾರಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಂದರೆ ಐಪಿಎಲ್ನಲ್ಲಿ 7500 ರನ್ ಪೂರೈಸಿದ್ದಾರೆ. ಈ ಮೂಲಕ ಈ ಲೀಗ್ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಕೊಹ್ಲಿ ಖಾತೆ ಸೇರಿದೆ
ಅಕ್ರಮವಾಗಿ ಮಗು ದತ್ತು ಪಡೆದ ಕೇಸ್ – ರೀಲ್ಸ್ ರಾಣಿ ಸೋನು ಜೈಲಿನಿಂದ ರಿಲೀಸ್!
ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಇದುವರೆಗೆ 242* ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಆಡಿರುವ 234 ಇನ್ನಿಂಗ್ಸ್ಗಳಲ್ಲಿ 38 ರ ಸರಾಸರಿ ಮತ್ತು 130 ಸ್ಟ್ರೈಕ್ ರೇಟ್ನಲ್ಲಿ 7500* ರನ್ ಗಳಿಸಿದ್ದಾರೆ. ಅಲ್ಲದೆ ಈ ಲೀಗ್ನಲ್ಲಿ ವಿರಾಟ್ ಕೊಹ್ಲಿ 52 ಅರ್ಧಶತಕಗಳ ಜೊತೆಗೆ 7 ಶತಕಗಳನ್ನು ಬಾರಿಸಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 7500 ರನ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕೊಹ್ಲಿ ನಂತರ ಪಂಜಾಬ್ ನಾಯಕ ಶಿಖರ್ ಧವನ್ ಇದುವರೆಗೆ 6755 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ 6545 ರನ್, ನಾಲ್ಕನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 6280 ರನ್ ಮತ್ತು ಸುರೇಶ್ ರೈನಾ 5528 ರನ್ ಗಳಿಸಿದ್ದಾರೆ